*ಗೋಣಿಕೊಪ್ಪಲು, ಜು. 4: ಅಕ್ರಮ ಮರ ಕಡಿದು ದಾಸ್ತಾನು ಮಾಡಿದ್ದ ಬಾಳೆಲೆಯ ರಾಜಾ ಅಯ್ಯಪ್ಪ ಅವರ ಮನೆಯ ಮೇಲೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಅಂದಾಜು ರೂ.70 ಸಾವಿರ ಮೌಲ್ಯದ ನಾಟಾಗಳನ್ನು ವಶಪಡಿಸಿಕೊಂಡಿರುವ ಘಟನೆ ಗುರುವಾರ ಜರುಗಿದೆ.ರಾಜಾ ಅಯ್ಯಪ್ಪ ಮನೆ ನಿರ್ಮಿಸಲು ಮತ್ತಿ, ನಂದಿ, ಅಕೇಶಿಯಾ ಮರದ ನಾಟಾಗಳನ್ನು ಕಡಿದು ಸಂಗ್ರಹಿಸಿದ್ದರು ಎನ್ನಲಾಗಿದೆ.ಇಲಾಖೆಯ ಅನುಮತಿ ಪಡೆಯದ ಕಾರಣ ದಾಳಿ ನಡೆಸಿದ ತಿತಿಮತಿ ವಲಯ ಅರಣ್ಯಾಧಿಕಾರಿ ಆಶೋಕ್ ಹುನುಗುಂದ ಹಾಗೂ ಸಿಬ್ಬಂದಿ ವರ್ಗದವರು ನಾಟಾ ವಶಪಡಿಸಿಕೊಂಡು ರಾಜಾ ಅಯ್ಯಪ್ಪ ಅವರ ಮೇಲೆ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.