ಮಡಿಕೇರಿ, ಜು. 3: ಮಡಿಕೇರಿಯಿಂದ ಮಂಗಳೂರು ಮಾರ್ಗವಾಗಿ ಭಾಗಮಂಡಲಕ್ಕೆ ತೆರಳುವ ಕಾಟಕೇರಿ ರಸ್ತೆಯು ಹಲವು ವರ್ಷಗಳಿಂದ ಹದಗೆಟ್ಟಿದ್ದು, ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗ್ರಾಮದ ಯುವಕರ ತಂಡ ತಮ್ಮ ಕೆಲಸ ಕಾರ್ಯಬಿಟ್ಟು ರಸ್ತೆಗಳಲ್ಲಿರುವ ಗುಂಡಿಗೆ ಕಲ್ಲು ಮಣ್ಣು ತುಂಬಿ ರಸ್ತೆಯನ್ನು ಸ್ವಲ್ಪಮಟ್ಟಿಗೆ ಸರಿಪಡಿಸುವ ಕೆಲಸವನ್ನು ಮಾಡಿದ್ದಾರೆ.

ರಸ್ತೆಯನ್ನು ಸರಿಪಡಿಸುವಂತೆ ಅನೇಕ ಬಾರಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಕಾಟಕೇರಿಯಿಂದ ಅಪ್ಪಂಗಳ ಮಾರ್ಗದಲ್ಲಿ ತೆರಳುವ ಸುಮಾರು 4 ಕಿ.ಲೋ ಮೀ ಗಳಷ್ಟು ಉದ್ದದ ರಸ್ತೆಗಳು ಸಂಪೂರ್ಣ ಮಡಿಕೇರಿ, ಜು. 3: ಮಡಿಕೇರಿಯಿಂದ ಮಂಗಳೂರು ಮಾರ್ಗವಾಗಿ ಭಾಗಮಂಡಲಕ್ಕೆ ತೆರಳುವ ಕಾಟಕೇರಿ ರಸ್ತೆಯು ಹಲವು ವರ್ಷಗಳಿಂದ ಹದಗೆಟ್ಟಿದ್ದು, ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗ್ರಾಮದ ಯುವಕರ ತಂಡ ತಮ್ಮ ಕೆಲಸ ಕಾರ್ಯಬಿಟ್ಟು ರಸ್ತೆಗಳಲ್ಲಿರುವ ಗುಂಡಿಗೆ ಕಲ್ಲು ಮಣ್ಣು ತುಂಬಿ ರಸ್ತೆಯನ್ನು ಸ್ವಲ್ಪಮಟ್ಟಿಗೆ ಸರಿಪಡಿಸುವ ಕೆಲಸವನ್ನು ಮಾಡಿದ್ದಾರೆ.

ರಸ್ತೆಯನ್ನು ಸರಿಪಡಿಸುವಂತೆ ಅನೇಕ ಬಾರಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಕಾಟಕೇರಿಯಿಂದ ಅಪ್ಪಂಗಳ ಮಾರ್ಗದಲ್ಲಿ ತೆರಳುವ ಸುಮಾರು 4 ಕಿ.ಲೋ ಮೀ ಗಳಷ್ಟು ಉದ್ದದ ರಸ್ತೆಗಳು ಸಂಪೂರ್ಣ ವಿದ್ಯಾರ್ಥಿಗಳಿಗೆ ಸಹಕಾರಿ ಯಾಗುವಂತೆ ಸರ್ಕಾರಿ ಬಸ್ಸ್‍ಗಳನ್ನಾದರೂ ಈ ಮಾರ್ಗವಾಗಿ ಸಂಚರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರೂ ಯಾವದೇ ಪ್ರಯೋಜನವಾಗಲಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇನ್ನಾದರೂ ಇತ್ತ ಗಮನ ಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಗ್ರಾಮದ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಾಗಿದ್ದ ಜನಪ್ರತಿನಿಧಿಗಳು ತಮಗೂ ಊರಿಗೂ ಯಾವದೇ ಸಂಬಂಧ ಇಲ್ಲವೆಂಬಂತೆ ನಿರ್ಲಕ್ಷ್ಯ ವಹಿಸಿದ್ದು, ಮತಯಾಚನೆ ಸಂದರ್ಭ ಮಾತ್ರ ಪ್ರತ್ಯಕ್ಷಗೊಳ್ಳುತ್ತಾರೆ.

ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸದಿದ್ದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗುವದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

- ಲೋಕೇಶ್ ಕಾಟಕೇರಿ