ಮಡಿಕೇರಿ, ಜು. 3: ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ರಾಜ್ಯಾದ್ಯಂತ 15 ಮಂದಿ ಆಯ್ಕೆಯಾಗಿದ್ದು, ಈ ಪೈಕಿ ಮಡಿಕೇರಿಯ ವಕೀಲ ಪಿ.ಎಂ. ಸಚಿನ್ ಅವರೂ ಕೂಡ ಆಯ್ಕೆಯಾಗಿದ್ದಾರೆ.

ಸಚಿನ್ ಮಡಿಕೇರಿ ನಿವಾಸಿ, ನಿವೃತ್ತ ಕೆಎಫ್‍ಡಿಸಿ ಅಧಿಕಾರಿ ಪಿ.ಎನ್. ಮನೋಹರ್ ಹಾಗೂ ಮಡಿಕೇರಿ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕಿ, ಕಸಾಪ ನಿರ್ದೇಶಕಿ ಡಿ.ಹೆಚ್. ಪುಷ್ಪ ಅವರ ಪುತ್ರ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಭಾರತೀಯ ವಿದ್ಯಾಭವನ, ಕೊಡಗು ವಿದ್ಯಾಲಯದಲ್ಲಿ ಪೂರೈಸಿದ್ದು, ಮೈಸೂರಿನ ಜೆಎಸ್‍ಎಸ್ ಲಾ ಕಾಲೇಜಿನಲ್ಲಿ ಎಲ್‍ಎಲ್‍ಬಿ ವ್ಯಾಸಂಗ ಮಾಡಿದ್ದಾರೆ. ಪ್ರಸ್ತುತ ಮಡಿಕೇರಿಯ ಹಿರಿಯ ವಕೀಲ, ನೋಟರಿ ಮುಕ್ಕಾಟಿ ಜಯಚಂದ್ರ ಅವರ ಎಂ.ಎಸ್.ಜೆ. ಅಸೋಸಿಯೇಟ್ಸ್‍ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.