ಕುಶಾಲನಗರ, ಜು. 3: ಕುಶಾಲನಗರ ಜೆಸಿಐ ಕಾವೇರಿ ಮತ್ತು ಸುದ್ದಿ ಸೆಂಟರ್ ಆಶ್ರಯದಲ್ಲಿ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಗಿಡ ನೆಡುವ ಮೂಲಕ ವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್ ಚಾಲನೆ ನೀಡಿದರು. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಗಮನ ಹರಿಸಿದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಾಗರಿಕರು ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದರು.
ಸುದ್ದಿ ಸೆಂಟರ್ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿದರು. ಜೆಸಿ ಅಧ್ಯಕ್ಷ ಕೆ.ಡಿ. ಪ್ರಶಾಂತ್, ಸಮುದಾಯ ಆರೋಗ್ಯ ಕೇಂದ್ರದ ಡಾ. ಕಿರಣ್, ಸಿಬ್ಬಂದಿ ರಮೇಶ್, ಜೆಸಿಐ ಕಾರ್ಯದರ್ಶಿ ಸುಜಯ್, ಸದಸ್ಯರಾದ ಸಂಧ್ಯಾ, ಆಶಾ, ರೋಷನ್ ಮತ್ತಿತರರು ಇದ್ದರು.