ಮಡಿಕೇರಿ, ಜು. 3: ಪ್ರಸಕ್ತ (2019-20) ಸಾಲಿನಲ್ಲಿ ಮುಖ್ಯಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ ಹಾಗೂ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮವನ್ನು 2019-20ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ನಿರುದ್ಯೋಗಿ ಯುವಕ-ಯುವತಿಯರಿಂದ ಸಹಾಯ ಧನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ (2019-20) ಸಾಲಿನ ಮುಖ್ಯಮಂತ್ರಿಗಳ ಉದ್ಯೋಗ ಸೃಜನ (ಸಿ.ಎಂ.ಇ.ಜಿ.ಪಿ) ಕಾರ್ಯಕ್ರಮದಡಿಯಲ್ಲಿ ಕೈಗಾರಿಕೆ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮುಖಾಂತರ ಎಸ್.ಸಿ/ಎಸ್.ಟಿ, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದವರಿಗೆ, ಸ್ವ ಉದ್ಯೋಗ ಮಾಡಿಕೊಳ್ಳುವವರಿಗೆ ಬ್ಯಾಂಕಿನಿಂದ ಗರಿಷ್ಠ 10 ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಠ ಶೇ.25 ರಿಂದ 35 ರವರೆಗೆ ಸಹಾಯಧನ ನೀಡಲಾಗುವದು.
ಅರ್ಹ ಅಭ್ಯರ್ಥಿಗಳು ತಿತಿತಿ.ಛಿmegಠಿ.ಞಚಿಡಿ.ಟಿiಛಿ.iಟಿ ನಲ್ಲಿ (ಂಉಇಓಅಙ ಅಔಆಇ ಏಗಿIಃ) ಎಂದು ಅರ್ಜಿಗಳನ್ನು ಅಳವಡಿಸಿ ಅದರ ಪ್ರತಿಯನ್ನು 2 ಸೆಟ್‍ನಲ್ಲಿ ದಾಖಲಾತಿಗಳೊಂದಿಗೆ ಕಚೇರಿಗೆ ಸಲ್ಲಿಸುವದು. ಅರ್ಜಿ ಸಲ್ಲಿಸಲು ತಾ. 10 ಕೊನೆಯ ದಿನವಾಗಿದೆ.
ಪ್ರಧಾನಮಂತ್ರಿಯವರ ಉದ್ಯೋಗ ಸೃಜನ(ಪಿ.ಎಂ.ಇ.ಜಿ.ಪಿ) ಕಾರ್ಯಕ್ರಮದಡಿಯಲ್ಲಿ ಕೈಗಾರಿಕೆ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮುಖಾಂತರ ಎಸ್.ಸಿ/ಎಸ್.ಟಿ, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದವರಿಗೆ, ಸ್ವ ಉದ್ಯೋಗ ಮಾಡಿಕೊಳ್ಳುವವರಿಗೆ ಬ್ಯಾಂಕಿನಿಂದ ಗರಿಷ್ಠ 25 ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಠ ಶೇ. 25 ರಿಂದ 35 ರವರೆಗೆ ಸಹಾಯಧನವನ್ನು ನೀಡಲಾಗುವದು.
ಅರ್ಹ ಅಭ್ಯರ್ಥಿಗಳು ತಿತಿತಿ.ಞviಛಿ.oಡಿg.iಟಿ ನಲ್ಲಿ (ಂಉಇಓಅಙ ಅಔಆಇ ಏಗಿIಃ) ಎಂದು ಅರ್ಜಿಗಳನ್ನು ಅಳವಡಿಸಿ ಅದರ ಪ್ರತಿಯನ್ನು 2 ಸೆಟ್‍ನಲ್ಲಿ ದಾಖಲಾತಿಗಳೊಂದಿಗೆ ಕಚೇರಿಗೆ ಸಲ್ಲಿಸುವದು. ಅರ್ಜಿ ಸಲ್ಲಿಸಲು ತಾ. 10 ಕೊನೆಯ ದಿನವಾಗಿದೆ.
ಹೆಚ್ಚಿನ ವಿವರಗಳಿಗೆ ಎಂ.ಎ. ಶಾಂತಿ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕ ಕೇಂದ್ರದ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ ಕಚೇರಿಯನ್ನು ಹಾಗೂ ದೂ.ಸಂ.08272-225946 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ತಿಳಿಸಿದ್ದಾರೆ.
ಉಚಿತ ಪರೀಕ್ಷಾ ಪೂರ್ವ ತರಬೇತಿಗೆ
ಪ್ರಸಕ್ತ(2019-20) ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ಪ್ರೊಬೇಷನರಿ ಆಫೀಸರ್ಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ತಾ. 12 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ಇಲಾಖಾ ವೆಬ್‍ಸೈಟ್ ತಿತಿತಿ.bಚಿಛಿಞತಿಚಿಡಿಜ ಛಿಟಚಿsses.ಞಚಿಡಿ.ಟಿiಛಿ.iಟಿ ನ್ನು ನೋಡುವದು. ಸಹಾಯವಾಣಿ 8050770004 ಹಾಗೂ ಹೆಚ್ಚಿನ ಮಾಹಿತಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಮ್ಯಾನ್ಸ್ ಕಾಂಪೌಂಡು ಹತ್ತಿರ, ಮಡಿಕೇರಿ ಕಚೇರಿಯನ್ನು ಹಾಗೂ ದೂ.ಸಂ : 08272-225628 ನ್ನು ಸಂಪರ್ಕಿಸಬಹುದು.
ಸಹಾಯ ಧನಕ್ಕೆ
ಮುಖ್ಯಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ ಹಾಗೂ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ನಿರುದ್ಯೋಗಿ ಯುವಕ, ಯುವತಿಯರಿಂದ ಸಹಾಯ ಧನಕ್ಕಾಗಿ ಆನಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ (2019-20) ಸಾಲಿನ ಮುಖ್ಯಮಂತ್ರಿಗಳ ಉದ್ಯೋಗ ಸೃಜನ (ಸಿ.ಎಂ.ಇ.ಜಿ.ಪಿ) ಕಾರ್ಯಕ್ರಮದಡಿಯಲ್ಲಿ ಕೈಗಾರಿಕೆ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮುಖಾಂತರ ಎಸ್.ಸಿ/ಎಸ್.ಟಿ, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದವರಿಗೆ, ಸ್ವ ಉದ್ಯೋಗ ಮಾಡಿಕೊಳ್ಳುವವರಿಗೆ ಬ್ಯಾಂಕಿನಿಂದ ಗರಿಷ್ಠ 10 ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಠ ಶೇ.25 ರಿಂದ 35 ರವರೆಗೆ ಸಹಾಯಧನ ನೀಡಲಾಗುವದು.
ಅರ್ಹ ಅಭ್ಯರ್ಥಿಗಳು ತಿತಿತಿ.ಛಿmegಠಿ.ಞಚಿಡಿ.ಟಿiಛಿ.iಟಿ ನಲ್ಲಿ (ಂಉಇಓಅಙ ಅಔಆಇ ಏಗಿIಃ) ಎಂದು ಅರ್ಜಿಗಳನ್ನು ಅಳವಡಿಸಿ ಅದರ ಪ್ರತಿಯನ್ನು 2 ಸೆಟ್‍ನಲ್ಲಿ ದಾಖಲಾತಿಗಳೊಂದಿಗೆ ಕಚೇರಿಗೆ ಸಲ್ಲಿಸುವದು. ಅಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯನ್ನು ಪರಿಗಣಿಸಲಾಗುವದು. ಅರ್ಜಿ ಸಲ್ಲಿಸಲು ತಾ. 10 ಕೊನೆಯ ದಿನವಾಗಿದೆ.
ಹೆಚ್ಚಿನ ವಿವರಗಳಿಗೆ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕ ಕೇಂದ್ರದ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ ಕಚೇರಿಯನ್ನು ಹಾಗೂ ದೂ. 08272-225946 ನ್ನು ಸಂಪರ್ಕಿಸಬಹುದು.
ಕಲಾ ಸಂಸ್ಥೆಗಳಿಂದ
ಯಕ್ಷಗಾನವನ್ನು ಪ್ರೀತಿಸಿ, ಅದರ ಉಳಿವು ಬೆಳವಿಗೆ, ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಶ್ರಮಿಸಿದ ಹಾಗೂ ಸೀಮಿತ ಪ್ರದೇಶದಲ್ಲಿ ಮಾತ್ರ ಪರಿಚಯಗೊಂಡ ಹಿರಿಯ ಕಲಾವಿದರನ್ನು ಹಾಗೂ ಯಕ್ಷಗಾನಕ್ಕೆ ಅವರು ನೀಡಿರುವ ಕೊಡುಗೆ ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ‘ಹಿರಿಯರ ನೆನಪು’ ಶೀರ್ಷಿಕೆಯ ಹಿರಿಯ ಕಲಾವಿದರ ಕಾರ್ಯಕ್ರಮ ನಡೆಸಲು ಕಲಾಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಕಾಡೆಮಿ ವತಿಯಿಂದ ಕಾರ್ಯಕ್ರಮ ನಡೆಸಲು ಸಂಸ್ಥೆಗೆ ರೂ. 10 ಸಾವಿರ ನೀಡಲಾಗುವದು. ಹೆಚ್ಚಿನ ವೆಚ್ಚಗಳನ್ನು ಸಂಸ್ಥೆಯವರೇ ವಹಿಸಿಕೊಳ್ಳಬೇಕು. ಒಂದು ಕಾರ್ಯಕ್ರಮದಲ್ಲಿ ಹಲವಾರು ಕಲಾವಿದರನ್ನು ಕುರಿತು ಕಾರ್ಯಕ್ರಮ ಕೂಡ ನಡೆಸಬಹುದಾಗಿದೆ.
‘ಹಿರಿಯರ ನೆನಪು’ ಸಂಸ್ಮರಣಾ ಕಾರ್ಯಕ್ರಮವನ್ನು ನಡೆಸಲು ಆಸಕ್ತಿಯಿರುವ ಕಲಾ ಸಂಸ್ಥೆಗಳು ಪೂರ್ಣ ವಿಳಾಸದೊಂದಿಗೆ (ದೂರವಾಣಿ/ ಮೊಬೈಲ್ ನಂಬರ್‍ನೊಂದಿಗೆ) ಅರ್ಜಿಯನ್ನು ತಾ. 25 ರೊಳಗಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು 560002 ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ 080-22113146 ಮೂಲಕ ಅಕಾಡೆಮಿಯನ್ನು ಸಂಪರ್ಕಿಸಬಹುದು ಎಂದು ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ತಿಳಿಸಿದ್ದಾರೆ.
ಅಪ್ರೆಂಟಿಸ್ ತರಬೇತಿಗೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳಾ ಉದ್ದೇಶಿತ ಅಪ್ರೆಂಟಿಸ್ ತರಬೇತಿಗೆ ಪತ್ರ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಇಬ್ಬರು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹಾಗೂ ಕನ್ನಡ ಭಾಷೆ ಬಳಸುವ ಪ್ರಬುದ್ಧತೆ ಇರಬೇಕು. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿ ಅವರಿಗೆ ಅಪ್ರೆಂಟಿಸ್ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ. ಅಪ್ರೆಂಟಿಸ್ ತರಬೇತಿ ಅವಧಿ 9 ತಿಂಗಳಾಗಿದ್ದು ಜುಲೈ 2019 ರಿಂದ ಮಾರ್ಚ್ 2020ರವರೆಗೆ ಇರುತ್ತದೆ. ಮಾಹೆಯಾನ ಪ್ರತಿ ಮಹಿಳಾ ಅಭ್ಯರ್ಥಿಗೆ 15 ಸಾವಿರ ರೂ ಗೌರವಧನ ನೀಡಲಾಗುತ್ತದೆ. ಜಿಲ್ಲೆಯ ಮಹಿಳಾ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವದು. ಅರ್ಜಿಯನ್ನು ಸಹಾಯಕ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಡಿಕೇರಿ ಕಚೇರಿಯಿಂದ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ತಾ. 5 ರೊಳಗೆ ಸಲ್ಲಿಸುವಂತೆ ತಿಳಿಸಿದೆ.