ನಾಪೆÉÇೀಕ್ಲು, ಜು. 3: ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಗೇಟ್ ಬಳಿ ಶಾಲಾ ಆವರಣದಲ್ಲಿ ಬುಡ ಒಣಗಿರುವ ಮರ ವೀರಾಜಪೇಟೆ- ನಾಪೆÉÇೀಕ್ಲು ಮುಖ್ಯರಸ್ತೆಗೆ ಚಾಚಿಕೊಂಡಿದ್ದು, ಅಪಾಯದ ಭೀತಿ ಮೂಡಿದೆ. ಅನಾಹುತ ಸಂಭವಿಸುವ ಮೊದಲು ಸಂಬಂಧಿಸಿದವರು ಇದರ ತೆರವಿಗೆ ಕ್ರಮಕೈಗೊಳ್ಳಬೇಕೆಂದು ಎಂ.ಎಸ್. ಇಬ್ರಾಹಿಂ ಮತ್ತಿತರರು ಆಗ್ರಹಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು ಈ ಮರದ ಕೆಳಗೆ ಮಕ್ಕಳು ಮತ್ತು ಸಾರ್ವಜನಿಕರು ನಡೆದಾಡುತ್ತಾರೆ. ರಸ್ತೆಯಲ್ಲಿ ಬಿಡುವಿಲ್ಲದೆ ವಾಹನಗಳು ಓಡಾಡುತ್ತವೆ. ಶಾಲಾ ಕಚೇರಿ ಎದುರು ಮರವಿದ್ದರೂ ಯಾರೂ ಇದರತ್ತ ಗಮನ ಹರಿಸದಿರುವದು ದುರಾದೃಷ್ಟಕರ. ಆದುದರಿಂದ ಸಂಬಂಧಿಸಿದವರು ಕೂಡಲೇ ಇದರ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.