ಮಡಿಕೇರಿ, ಜು. 1: ನಗರದ ರಾಜಾಸೀಟು ರಸ್ತೆಯಿಂದ ಎಫ್‍ಎಂಸಿ ಕಾಲೇಜಿಗೆ ತೆರಳುವ ರಸ್ತೆಯ ರಾಡ್ರಿಗಸ್ ಕಟ್ಟಡದ ಬಳಿ ಇರುವ ಎರಡು ತಿರುವುಗಳಲ್ಲಿ ಆಗಿಂದಾಗ್ಗೆ ಅಪಘಾತಗಳು ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ತಿರುವುಗಳಲ್ಲಿ ರಸ್ತೆ ಉಬ್ಬು ನಿರ್ಮಿಸಬೇಕು ಅಥವಾ ಸಂಚಾರಿ ಪೊಲೀಸರನ್ನು ನಿಯೋಜಿಸಬೇಕು ಎಂದು ರೇಸ್ ಕೋರ್ಸ್ ರಸ್ತೆಯ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.