ಶನಿವಾರಸಂತೆ, ಜು. 1: ಭಾನುವಾರ ಸಂಜೆ ಶನಿವಾರಸಂತೆ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಇಲಾಖೆ ಜೀಪಿನಲ್ಲಿ ಕರ್ತವ್ಯದಲ್ಲಿರುವಾಗ ಶನಿವಾರಸಂತೆ ಬೈಪಾಸ್ ರಸ್ತೆಯಲ್ಲಿ ಐಶ್ವರ್ಯ ಬಾರ್ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಆರೋಪಿಗಳಾದ ಹೆಮ್ಮನೆ ಗ್ರಾಮದ ಕಾರ್ತಿಕ್, ಹೊಸೂರು ಗ್ರಾಮದ ವಿನಯ್, ಹಳ್ಳಿಮನೆ ಹೊಟೇಲ್ ನೌಕರ ಚಿರಂಜೀವಿ, ಶನಿವಾರಸಂತೆ ಬೈಪಾಸ್ ರಸ್ತೆಯ ದಿಲೀಪ್ ಈ ನಾಲ್ವರು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದುದನ್ನು ಕಂಡ ಪೊಲೀಸರು ಮಧ್ಯಪ್ರವೇಶಿಸಿ ಆರೋಪಿ ಕಾರ್ತಿಕ್ ಕೈಯಿಂದ ಬ್ಯಾಟ್ ಅನ್ನು ಕಿತ್ತುಕೊಂಡು ನಾಲ್ವರನ್ನು ಬಂಧಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಶಾಂತಿಗೆ ಭಂಗ ಉಂಟು ಮಾಡುತ್ತಿದ್ದುದರಿಂದ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ನಾಲ್ವರು ಆರೋಪಿಗಳ ವಿರುದ್ಧ ಕಲಂ 324, 160 ರೆ/ವಿ 34 ಐಪಿಸಿ ರೀತಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.