ಮಡಿಕೇರಿ, ಜು. 1: ಮಡಿಕೇರಿ ರೋಟರಿ ಕ್ಲಬ್‍ನ 67ನೇ ಅಧ್ಯಕ್ಷರಾಗಿ ವಕೀಲ ಕಿರಿಯಮಾಡ ರತನ್ ತಮ್ಮಯ್ಯ, ಕಾಂiರ್Àದರ್ಶಿಯಾಗಿ ಕೆ.ಸಿ. ಕಾರ್ಯಪ್ಪ ನೇಮಕಗೊಂಡಿದ್ದಾರೆ.
ರೋಟರಿ ಕ್ಲಬ್‍ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ತಾ. 5 ರಂದು ಸಂಜೆ 7 ಗಂಟೆಗೆ ಮಡಿಕೇರಿ ಕೊಡವ ಸಮಾಜದಲ್ಲಿ ಆಯೋಜಿತವಾಗಿದೆ. ಹೆಸರಾಂತ ವಾಗ್ಮಿ ಸೂರ್ಯಪ್ರಕಾಶ್ ಭಟ್ ಪದಗ್ರಹಣ ನೆರವೇರಿಸಲಿದ್ದಾರೆ. ನಿವೃತ್ತ ಮೇಜರ್ ಜನರಲ್ ಕೆ.ಸಿ. ಕಾರ್ಯಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ವಲಯ 6ರ ಸಹಾಯಕ ರಾಜ್ಯಪಾಲ ಪಿ. ನಾಗೇಶ್, ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಜೋನಲ್ ಲೆಫ್ಟಿನೆಂಟ್ ಕೇಶವಪ್ರಸಾದ್ ಮುಳಿಯ, ನಿರ್ಗಮಿತ ಅಧ್ಯಕ್ಷ ಓ.ಎಸ್ ಚಿಂಗಪ್ಪ, ಕಾರ್ಯದರ್ಶಿ ಮೃಣಾಲಿನಿ ಪಾಲ್ಗೊಳ್ಳಲಿದ್ದಾರೆ.
ಡಿ.ಎಂ. ಕಿರಣ್, ಎಂ.ಎಂ. ಕಾರ್ಯಪ್ಪ, ಎಂ. ಈಶ್ವರ ಭಟ್, ಎನ್.ಡಿ. ಅಚ್ಚಯ್ಯ ಅನಿಲ್ ಕೃಷ್ಣಾನಿ, ಡಾ. ಜನಾರ್ಧನ್, ಅಮರ್ ಶರ್ಮ, ಎಂ.ಎಸ್. ಕರುಂಬಯ್ಯ, ಡಾ. ಮೋಹನ್ ಅಪ್ಪಾಜಿ, ಸಿ.ಟಿ. ಮಂದಣ್ಣ, ಚಂಗಪ್ಪ, ಪಾರ್ವತಿ ಎಂ.ಜಿ., ಎನ್.ಸಿ. ಚೀಯಣ್ಣ, ಸಲೀಲಾ ಪಾಟ್ಕರ್, ಅಜಯ್ ಸೂದ್, ಗೀತಾ ಗಿರೀಶ್ ವಿವಿಧ ಯೋಜನಾ ಸಮಿತಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.