ಶ್ರೀಮಂಗಲ, ಜು. 2: ದ.ಕೊಡಗಿನ ನಾಲ್ಕೇರಿ ಗ್ರಾಮದಲ್ಲಿ ಕಾಡಾನೆ ಹಿಂಡುಗಳು ತೋಟಕ್ಕೆ ನುಗ್ಗಿ ಬಾಳೆ, ಅಡಿಕೆ ಫಸಲುಗಳನ್ನು ನಾಶÀ ಮಾಡಿದೆ.
ಗ್ರಾಮದ ತಡಿಯಂಗಡ ಕುಮಾರಿ ಅವರ ತೋಟಕ್ಕೆ ನುಗ್ಗಿರುವ ಕಾಡಾನೆ ಹಿಂಡುಗಳು ಫಸಲು ಇರುವ ಬಾಳೆ ಬೆಳೆಯನ್ನು ನಾಶ ಮಾಡಿದ್ದು, ರೂ. 5ಲಕ್ಷಗಳಷ್ಟು ನಷ್ಟವಾಗಿದೆ ಎಂದು ಶ್ರೀಮಂಗಲ ವಲಯ ಅರಣ್ಯಾಧಿಕಾರಿಯವರಿಗೆ ನೀಡಿರುವ ತಮ್ಮ ದೂರಿನಲ್ಲಿ ಕೇಳಿಕೊಂಡಿದ್ದಾರೆ.
ಸ್ಥಳಕ್ಕೆ ಪ್ರ್ರೊ. ನಂಜುಂಡಸ್ವಾಮಿ ಬಣದ ರೈತ ಸಂಘ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ ಹಾಗೂ ಕಾರ್ಯಕರ್ತರು ತೆರಳಿ ಪರಿಶೀಲಿಸಿ, ಬೆಳೆ ನಷ್ಟಗೊಂಡಿರುವ ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ರೈತ ಸಂಘದ ಪ್ರಮುಖರಾದ ಚಂಗು¯ಂಡÀ ರಾಜಪ್ಪ, ಅಯ್ಯಮಾಡ ಹ್ಯಾರಿ ಸೋಮೇಶ್, ಬಾದುಮಂಡ ಮಹೇಶ್, ಕುಂಜ್ಞಂಗಡ ಸಿದ್ದು, ಮಾಣೀರ ದೇವಯ್ಯ, ಶಿವಾಚಾರರ ಲೋಕೇಶ್, ಮಹೇಶ್ ಮತ್ತು ಪ್ರವೀಣ ಹಾಜರಿದ್ದರು.