ವೀರಾಜಪೇಟೆ, ಜು. 2: ಗೋಣಿಕೊಪ್ಪ-ಹುಣಸೂರು ರಾಜ್ಯ ಹೆದ್ದಾರಿಯ ದೇವರಪುರದ ಸಮೀಪದ ಸೋಮವಾರ ಸಂಜೆ ನಡೆದ ಕಾರು-ಬೈಕ್ ನಡುವಿನ ಅಪಘಾತದಲ್ಲಿ ವೀರಾಜಪೇಟೆಯ ವಿಜಯನಗರ ನಿವಾಸಿ ಇಮ್ತಿಯಾಝ್ ಅಹಮದ್ ಎಂಬವರ ಪುತ್ರ ಅಫ್ರೀದಿ (22) ಸಾವನ್ನಪ್ಪಿದ್ದಾನೆ.
ಬೈಕ್ ಹಿಂಬದಿ ಸವಾರ ಮುಹಮ್ಮದ್ ರಫೀಖ್ ಎಂಬವರ ಮಗ ಆದಿಲ್‍ನ ಬಲ ಕಾಲಿಗೆ ತೀವ್ರ ಪೆಟ್ಟಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಯುವಕರು ಬೈಕ್‍ನಲ್ಲಿ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳುತಿದ್ದಾಗ ಮೈಸೂರು ಕಡೆಯಿಂದ ಬಂದ ಕೇರಳ ನೋಂದಣಿಯ ವ್ಯಾಗನರ್ ಕಾರು ಮತ್ತೊಂದು ವಾಹನವನ್ನು ಹಿಂದಿಕ್ಕುವ ರಭಸದಲ್ಲಿ ಬೈಕ್‍ಗೆ ಡಿಕ್ಕಿಯಾಗಿದೆ. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಅಫ್ರೀದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಮೊಕದ್ದಮೆ ದಾಖಲಾಗಿದೆ.