ಗೋಣಿಕೊಪ್ಪ ವರದಿ, ಜೂ. 30: ಇಲ್ಲಿನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಕಳ್ಳಂಗಡ ನಿತಿ ಪೂಣಚ್ಚ, ಕಾರ್ಯದರ್ಶಿಯಾಗಿ ಡಾ. ಅಮ್ಮಂಡ ಚಿಣ್ಣಪ್ಪ ಪದಗ್ರಹಣ ಸ್ವೀಕರಿಸಿದರು.

ಉಪಾಧ್ಯಕ್ಷರಾಗಿ ಕೊಂಗಂಡ ಅಚ್ಚಯ್ಯ, ಪಾರುವಂಗಡ ಜೀವನ್, ಖಜಾಂಜಿಯಾಗಿ ಅಲ್ಲುಮಾಡ ಸುನಿಲ್ ಈ ಸಂದರ್ಭ ಪದಗ್ರಹಣ ಸ್ವೀಕರಿಸಿದರು.

ಕುಕೂನ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಪುತ್ತಮನೆ ಸ್ಮರಣ್ ಶುಭಾಶ್ ಅವರಿಂದ ಅಧಿಕಾರ ಪಡೆದುಕೊಂಡರು. ಗವರ್ನರ್ ಶ್ರೀನಿವಾಸ್ ಪದಗ್ರಹಣ ಬೋಧಿಸಿದರು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬೋಸ್ ಪೆಮ್ಮಯ್ಯ, ವಲಯ ಅಧ್ಯಕ್ಷ ಡಾ. ಸೂರಜ್ ಉತ್ತಪ್ಪ, ನಿರ್ಗಮಿತ ಕಾರ್ಯದರ್ಶಿ ಪಾರುವಂಗಡ ಜೀವನ್ ಉಪಸ್ಥಿತರಿದ್ದರು.