ಮಡಿಕೇರಿ, ಜೂ. 30: ಪೊನ್ನಂಪೇಟೆ ಗ್ರಾ.ಪಂ.ನ 1ನೇ ವಿಭಾಗದ ವಾರ್ಡ್ ಸಭೆಯು ತಾ. 3 ರಂದು ಸಂಜೆ 4 ಗಂಟೆಗೆ ಎಂ.ಜಿ. ನಗರದ ಸಮುದಾಯ ಭವನದಲ್ಲಿ ಎ.ಎಂ. ರಶೀದ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

2ನೇ ವಿಭಾಗದ ವಾರ್ಡ್ ಸಭೆಯು ತಾ. 3 ರಂದು ಬೆಳಿಗ್ಗೆ 11 ಗಂಟೆಗೆ ಗಣಪತಿ ನಗರ ಕಾವೇರಿ ಕೊಡವ ಕೂಟ ಸಭಾಂಗಣದಲ್ಲಿ ಎಂ.ಪಿ. ಲಕ್ಷ್ಮಣ ಅಧ್ಯಕ್ಷತೆಯಲ್ಲಿ ನಡೆಯಲಿದೆ.

3ನೇ ವಿಭಾಗದ ವಾರ್ಡ್ ಸಭೆಯು ತಾ. 4 ರಂದು ಬೆಳಿಗ್ಗೆ 11 ಗಂಟೆಗೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಜಯಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. 4ನೇ ವಿಭಾಗದ ವಾರ್ಡ್ ಸಭೆಯು ತಾ. 4 ರಂದು ಅಪರಾಹ್ನ 3 ಗಂಟೆಗೆ ಶಿವಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ರೂಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.

5ನೇ ವಿಭಾಗದ ವಾರ್ಡ್ ಸಭೆಯು ತಾ. 5 ರಂದು ಬೆಳಿಗ್ಗೆ 11 ಗಂಟೆಗೆ ಕೃಷ್ಣ ಕಾಲೋನಿ ಕೆಳಗಿನ ಅಂಗನವಾಡಿ ಕೇಂದ್ರದಲ್ಲಿ ಕೆ.ಎನ್. ಸುಮತಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. 6ನೇ ವಿಭಾಗದ ವಾರ್ಡ್ ಸಭೆಯು ತಾ. 5 ರಂದು ಸಂಜೆ 4 ಗಂಟೆಗೆ ಕೊಡವ ಸಮಾಜ ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಟಿ.ಸಿ. ಮಂಜು ಅಧ್ಯಕ್ಷತೆಯಲ್ಲಿ ನಡೆಯಲಿದೆ.