ಸುಂಟಿಕೊಪ್ಪ, ಜೂ. 30: ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಾಲಾ ಸಂಸತ್, ನೂತನ ನಾಯಕರುಗಳ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.
ಶಾಲಾ ಸಂಸತ್ ನಾಯಕನಾಗಿ ಜೋಯಲ್ ಬಿ.ವರ್ಗಿಸ್ ಉಪನಾಯಕನಾಗಿ ನಿತಿನ್, ಗೃಹಮಂತ್ರಿಯಾಗಿ ಅರುಣ್ ಉಪಗೃಹ ಮಂತ್ರಿಯಾಗಿ ಗ್ಲಾನಿಯ, ಸಾಂಸ್ಕøತಿಕ ಮಂತ್ರಿಯಾಗಿ ಎಲ್ಟಿಟಾ, ಆರೋಗ್ಯ ಮಂತ್ರಿ ತೀರ್ಥ, ಸಹಮಂತ್ರಿಯಾಗಿ ಶಾಭಿರ ಕ್ರೀಡಾ ನಾಯಕನಾಗಿ ಮೊಹಮ್ಮದ್ ಸಾಹಿಲ್, ಉಪಕ್ರೀಡಾನಾಯಕನಾಗಿ ಅಂಕಿತ್, ಇಂಗ್ಲೀಷ್ ಸ್ಪೀಕಿಂಗ್ ನಾಯಕಿಯಾಗಿ ಪ್ರಗತಿ, ಉಪ ನಾಯಕಿ ಸಾಲಿಹ ನೇಮಕಗೊಂಡರು. ವ್ಯವಸ್ಥಾಪಕ ಫಾ. ಎಡ್ವರ್ಡ್ ವಿಲಿಯಂ ಸಾಲ್ಡಾನಾ ಪ್ರಮಾಣ ವಚನ ಬೋಧಿಸಿದರು.
ಸಮವಸ್ತ್ರ ವಿತರಣೆ : ಶಾಲಾ ಮುಖ್ಯೋಪಾದ್ಯಾಯನಿ ವೀರಾ ನಾಯರ್ ಪಾಥಮಿಕ ಶಾಲೆಯ ಸಮವಸ್ತ್ರ ಹಾಗೂ ಶುಲ್ಕವನ್ನು ನೀಡಲಾಯಿತು.
ಈ ಸಂದರ್ಭ ಹಳೆಯ ವಿದ್ಯಾರ್ಥಿಗಳಾದ ಸುರೇಶ್ ಗೋಪಿ, ಮೊಹಮ್ಮದ್ ರಫೀಕ್, ಮುಸ್ತಾಫ, ಸುಧೀಶ್, ನಯಮತ್ತುಲ್ಲಾ, ಶಾಲಾ ಸಹಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.