ಗೋಣಿಕೊಪ್ಪ, ಜೂ. 30: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯು ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಉದ್ದೇಶದಿಂದ ಈ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಯಿತು.

ಶಾಲಾ ನಾಯಕ, ಶಾಲಾ ನಾಯಕಿ, ಕ್ರೀಡೆ, ಶಿಸ್ತು, ಸಾಂಸ್ಕøತಿಕ ಕ್ಷೇತ್ರಕ್ಕೆ ನಾಯಕ-ನಾಯಕಿಯರ ಆಯ್ಕೆಗಾಗಿ ಚುನಾವಣೆ ನಡೆಯಿತು. ಈ ಮತದಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು ಭಾಗವಹಿಸಿದ್ದರು. ಶಾಲಾ ನಾಯಕನಾಗಿ ಯಶಸ್, ಶಾಲಾ ನಾಯಕಿಯಾಗಿ ಅರಿಲ್ ಟಿ.ಎಸ್, ಕ್ರೀಡಾ ನಾಯಕನಾಗಿ ಧÀನುಷ್‍ಗೌಡ ಸಿ.ಎಸ್., ಸಹ ಕ್ರೀಡಾ ನಾಯಕಿಯಾಗಿ ಮೌಲ್ಯ ಮಹೇಶ್ ಟಿ., ಶಿಸ್ತಿನ ನಾಯಕಿಯಾಗಿ ಆಮ್ನ ಅಮೀರ್, ಸಾಂಸ್ಕøತಿಕ ನಾಯಕನಾಗಿ ಶಿಶಿರ್ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕಿ ಶಾಂತಿ ಅಚ್ಚಪ್ಪ, ಟ್ರಷ್ಟಿ ರಕ್ಷಿತ್ ಅಯ್ಯಪ್ಪ, ಪ್ರಾಂಶುಪಾಲ ಅರುಣ್‍ಕುಮಾರ್ ಸೇರಿದಂತೆ ಎಲ್ಲಾ ಶಿಕ್ಷಕ ವರ್ಗದವರು ಭಾಗಿಯಾಗಿದ್ದರು.