ಮಡಿಕೇರಿ, ಜೂ. 30: ಕೊಡಗು ಅರಣ್ಯ ವೃತ್ತ ಕಛೇರಿಯ ವಿವಿಧ ಇಲಾಖೆಗಳಲ್ಲಿ ದಲಾಯತ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನಿಸಾರ್ ಅಹಮ್ಮದ್ ಅವರು ತಾ. 29 ರಂದು ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದರು.
ಇವರನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಪರವಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಜೆ. ಗೋವರ್ಧನ್‍ಸಿಂಗ್ ಮತ್ತು ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಟ್ಟರು.