ಮಡಿಕೇರಿ, ಜೂ. 30: ಕೊಣಂಜಗೇರಿ ಗ್ರಾ.ಪಂ.ನ 2019-20ನೇ ಸಾಲಿನ ಕೊಣಂಜಗೇರಿ, ಬಾವಲಿ, ಕಿರುಂದಾಡು, ಕೈಕಾಡು ಹಾಗೂ ಬಲಮುರಿ ಗ್ರಾಮಗಳ ವಾರ್ಡ್ ಸಭೆಗಳನ್ನು ಆಯಾ ಗ್ರಾಮದ ಗ್ರಾ.ಪಂ. ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ತಾ. 4 ರಂದು ಬಲಮುರಿ ಸಮುದಾಯ ಭವನದಲ್ಲಿ ಪೂರ್ವಾಹ್ನ 10.30ಕ್ಕೆ ಬಿದ್ದಂಡ ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕೊಣಂಜಗೇರಿ ವಾರ್ಡ್‍ನ ಮೂಕಂಡಬಾಣೆ ಸಮುದಾಯ ಭವನ ಕಟ್ಟಡದಲ್ಲಿ ಅಪರಾಹ್ನ 2.30ಕ್ಕೆ ಬಲ್ಯಾಟಂಡ ಜಿ. ಕುಟ್ಟಯ್ಯ ಅಧ್ಯಕ್ಷತೆಯಲ್ಲಿ ಜರುಗಲಿದೆ.
ತಾ. 5 ರಂದು ಕಿರುಂದಾಡು, ಕೈಕಾಡು ಸಭೆ ಕೈಕಾಡು ಭಗವತಿ ಸಮುದಾಯ ಭವನದಲ್ಲಿ ಪೂರ್ವಾಹ್ನ 11ಕ್ಕೆ ಎನ್.ಟಿ. ಮುತ್ತಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ತಾ. 9 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣ, ಪಾರಾಣೆಯಲ್ಲಿ ಪೂರ್ವಾಹ್ನ 11ಕ್ಕೆ ವನಿತಾ ತಮ್ಮಯ್ಯ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ಏರ್ಪಡಿಸಲಾಗಿದೆ.