ಮಡಿಕೇರಿ, ಜೂ. 29: ಸಾಣೇಹಳ್ಳಿ ಶ್ರೀಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಆಗಸ್ಟ್ 1ರಿಂದ ಆಗಸ್ಟ್ 30ರ ತನಕ ‘ಮತ್ತೆ ಕಲ್ಯಾಣ’ ಹೆಸರಿನ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಮಡಿಕೇರಿಯಲ್ಲಿ ಆಗಸ್ಟ್ 5 ರಂದು ದಿನಪೂರ್ತಿ ನಡೆಯಲಿರುವ ‘ಮತ್ತೆ ಕಲ್ಯಾಣ’ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚೆ, ತೀರ್ಮಾನ ಕೈಗೊಳ್ಳಲು ತಾ. 30ರಂದು ಪೂರ್ವಭಾವಿ ಸಭೆಯನ್ನು ಸುದರ್ಶನ ವೃತ್ತದ ಅಂಬೇಡ್ಕರ್ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.