ಮಡಿಕೇರಿ, ಜೂ. 29: ಸ.ಹಿ.ಪ್ರಾ. ಶಾಲೆ ಊರುಬೈಲು ಚೆಂಬು ಶಾಲೆಗೆ ಚೆಂಬು ಗ್ರಾ. ಪಂ.ವತಿಯಿಂದ ಉಚಿತವಾಗಿ ಲ್ಯಾಪ್‍ಟಾಪ್ ವಿತರಿಸ ಲಾಯಿತು. ಕಾರ್ಯಕ್ರಮದಲ್ಲಿ ಚೆಂಬು ಗ್ರಾ. ಪಂ. ಅಧ್ಯಕ್ಷ ಯು.ಕೆ. ದಿನೇಶ್‍ಕುಮಾರ್, ಸದಸ್ಯ ವಾಸು ನಿಡಿಂಜಿ, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.