ಸುಂಟಿಕೊಪ್ಪ, ಜೂ. 29: ಜಮಾಅತ್‍ನವರು ವಕ್ಫ್ ಬೋರ್ಡ್‍ನೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು, ಸರಕಾರದ ಅನುದಾನವನ್ನು ಬಳಸಿಕೊಂಡು ಮಸೀದಿ ಮದರಸ ಅಭಿವೃದ್ಧಿಪಡಿಸಲು ಮುಂದಾಗಬೇಕೆಂದು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಎ. ಯಾಕೂಬ್ ಹೇಳಿದರು.

ಇಲ್ಲಿನ ಖತೀಜಾಉಮ್ಮ ಮಸೀದಿಯ ಸಭಾಂಗಣದಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಜಮಾಯತ್ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದದರು. ಮಸೀದಿಯ ಜಾಗವು ನೋಂದಾಣಿ ಮಾಡದಿದ್ದರೆ ಕೂಡಲೇ ಮಾಡಿಸಿ ಜಾಗದ ದಾಖಲೆ ಪತ್ರವನ್ನು ಸುಭದ್ರವಾಗಿ ಇಟ್ಟುಕೊಳ್ಳಬೇಕು. ಮಸೀದಿ, ಮದರಸ ಕಟ್ಟಡದ ಅಭಿವೃದ್ಧಿ ಹಾಗೂ ತಡೆ ಗೋಡೆಗೆ ಹಂತ ಹಂತವಾಗಿ ಅನುದಾನವನ್ನು ನೀಡಲಾಗುವದು. ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತೇವೆ ಹೃದಯರೋಗ,ಕಿಡ್ನಿವೈಫಲ್ಯ,ಮೆದಳುರೋಗ, ಕ್ಯಾನ್ಸ್‍ರ್ ಸಂಬಂಧಿ ಖಾಯಿಲೆ ಇರುವವರಿಗೆ 1 ಲಕ್ಷ ರೂ.ವರೆಗೆ ವಕ್ಫ್ ಬೋರ್ಡಿನಿಂದ ಧನಸಹಾಯ ಒದಗಿಸಲಾಗುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ನಿಯಮಿತವಾಗಿ ಜಮಾಯತ್‍ನ ವಾರ್ಷಿಕ ಸಭೆ ಲೆಕ್ಕ ಪತ್ರವನ್ನು ಅಚ್ಚುಕಟ್ಟಾಗಿ ಇಡಬೇಕು ಎಂದು ಯಾಕೂಬ್ ತಿಳಿ ಹೇಳಿದರು.

ಸಭೆಯ ಉದ್ಘಾಟನೆಯನ್ನು ಉಸ್ಮಾನ್ ಫೈಜಿ ನೇರವೇರಿಸಿದರು. ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಜಮಾಯತ್‍ನ ಅಧ್ಯಕ್ಷ ಹಸನ್‍ಕುಂಞ ಹಾಜಿ ಮಾತನಾಡಿದರು. ಹಮೀದ್ ಮೌಲವಿ ಸ್ವಾಗತಿಸಿ,ಕೆ.ಎಚ್.ಶರೀಫ್ ನಿರೂಪಿಸಿದರು.