ಸೋಮವಾರಪೇಟೆ, ಜೂ. 29: 2018-19ನೇ ಸಾಲಿನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತಿ ಹೆಚ್ಚು (594) ಅಂಕಗಳಿಸಿದ ಐಗೂರು ಪ್ರೌಢಶಾಲಾ ವಿದ್ಯಾರ್ಥಿನಿ ಎ. ಸುಮಿತ್ರ ಅವರನ್ನು ಐಗೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷೆ ಕೆ.ಪಿ. ಶೋಭಾ, ಸದಸ್ಯರಾದ ಚಂಗಪ್ಪ, ಕೆ.ಪಿ. ದಿನೇಶ್ ಸೇರಿದಂತೆ ಇತರರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಂಗರಾಜ್ ಹಾಗೂ ಪೋಷಕರಾದ ಆನಂದ ಮತ್ತು ಚಂದ್ರಾವತಿ ಉಪಸ್ಥಿತರಿದ್ದರು.