ಗೋಣಿಕೊಪ್ಪ ವರದಿ, ಜೂ. 29: ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ತರಕಾರಿ ತೋಟಕ್ಕೆ ಕಾಡಾನೆ ದಾಳಿ ನಡೆಸಿರುವದರಿಂದ ಮೊಳಕೆ ಸ್ಥಿತಿಯಲ್ಲಿದ್ದ ತರಕಾರಿ ಬೆಳೆ ನಾಶವಾಗಿದೆ. ಕಳೆದ ರಾತ್ರಿ ಶಾಲೆ ಆವರಣಕ್ಕೆ ಬಂದ ಆನೆಗಳು ಆವರಣದಲ್ಲಿ ನಡೆದಾಡಿದೆ. ಈ ಸಂದÀರ್ಭ ಆವರಣದಲ್ಲಿರುವ ತರಕಾರಿ ತೋಟಕ್ಕೆ ನುಗ್ಗಿ ಬೆಳೆಗಳನ್ನು ತುಳಿದು ನಾಶ ಮಾಡಿವೆ.