*ಗೋಣಿಕೊಪ್ಪಲು, ಜೂ. 28: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ವೀರಾಜಪೇಟೆ ಶಾಖೆಯ ನೂತನ ಅಧ್ಯಕ್ಷರು, ಪದಾಧಿಕಾರಿ ಗಳು ಹಾಗೂ ಸದಸ್ಯರುಗಳ ಆಯ್ಕೆ ನಡೆಯಿತು.

2019-24ನೇÀ ಅವಧಿಗೆ ತಾಲ್ಲಕು ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಬಿ.ಎಸ್. ಗುರುರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಪರಿಷತ್ ಸದಸ್ಯರಾಗಿ ಶಿಕ್ಷಣ ಇಲಾಖೆಯ ಸುರೇಂದ್ರ ಮತ್ತು ತಾಲ್ಲಕು ಖಜಾಂಚಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಶ್ರೂಷಕಿ ಎ.ಬಿ. ಲಲಿತ ಇವರನ್ನು ಆಯ್ಕೆಮಾಡಲಾಗಿದೆ.

ಸದಸ್ಯರುಗಳಾಗಿ ಕೃಷಿ ಇಲಾಖೆಯಿಂದ ಅಶ್ವಿನಿ ಕುಮಾರ್, ವಾಣಿಜ್ಯ ತೆರಿಗೆ ಇಲಾಖೆಯಿಂದ ಟಿ.ಆರ್. ಪದ್ಮಕುಮಾರ್, ಕಂದಾಯ ಇಲಾಖೆ ಎಂ.ಎಲ್ ಹರೀಶ್, ಲೋಕೋಪಯೋಗಿ ಇಲಾಖೆ ಪಿ.ವಿ. ವಿಶ್ವನಾಥ್, ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಶಾಲೆಗಳ ವತಿಯಿಂದ ಸುರೇಂದ್ರ ಸರ್ಕಾರಿ ಪ್ರೌಢಶಾಲೆ ಎ.ಪಿ. ಮಂಗಳ, ಕಿರಿಯ ಪದವಿ ಪೂರ್ವ ಕಾಲೇಜು ಕೆ.ಬಿ. ಗೌರಿ, ಬಿ.ಇ.ಓ ಕಚೇರಿ ವತಿಯಿಂದ ಬಿ.ಎಸ್. ಗುರುರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಲಲಿತ ಎ.ಬಿ., ಬಿ.ಕೆ. ಗೀತಾ, ಎ.ಎಸ್. ಪುಷ್ಪಾವತಿ, ಭೂಮಾಪನ ಇಲಾಖೆ ಸಣ್ಣ ಜವರಯ್ಯ, ನ್ಯಾಯಾಂಗ ಇಲಾಖೆ ಗೋವಿಂದ ರಾಜು ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ಎಂ.ಜಿ. ಗಣೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.