ಕುಶಾಲನಗರ, ಜೂ. 28: ಬೈಲುಕೊಪ್ಪೆ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ವಿವಿಧೆಡೆ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಹಿನೆÀ್ನಲೆಯಲ್ಲಿ ಬೈಲುಕೊಪ್ಪೆ ಪೊಲೀಸರು ದಾಳಿ ಮಾಡಿ ಮೂವರು ಟಿಬೇಟಿಯನ್ ನಾಗರಿಕರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಹುಣಸೂರು ಡಿವೈಎಸ್ಪಿ ವೆಂಕಟೇಶ್ ಅವರ ನೇತೃತ್ವದಲ್ಲಿ ಬೈಲುಕೊಪ್ಪ ಠಾಣಾಧಿಕಾರಿ ಸಿ.ಯು.ಸವಿ ಮತ್ತು ಸಿಬ್ಬಂದಿಗಳು ಬೈಲುಕೊಪ್ಪೆಯ 1ನೇ ಕ್ಯಾಂಪ್‍ನಲ್ಲಿ ಕಾರ್ಯಾಚರಣೆ ನಡೆಸಿದ್ದು ಟಿಬೇಟಿಯನ್ ನಾಗರಿಕರಾದ ಸೋನಮ್ ಪುಂಡ್ಸೋಕ್, ಸೆರಿಂಗ್ ನೋರ್ಬು, ಮಿಗ್ಮಾರ್ ಎಂಬವರನ್ನು ಬಂಧಿಸಿದ್ದಾರೆ. ಸುಮಾರು 15 ಕೆಜಿ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಎಎಸ್‍ಐ ಶಿವರಾಜು, ಶ್ರೀನಿವಾಸ್, ಉಮೇಶ್, ಅಣ್ಣಯ್ಯ, ಮಹದೇವ್, ತ್ರಿನೇಶ್, ಅಶೋಕ್, ಸೋಮಶೇಖರ್, ಚಾಲಕ ರವಿ ಅವರುಗಳು ಪಾಲ್ಗೊಂಡಿದ್ದರು.