ಮಡಿಕೇರಿ, ಜೂ. 27: ಇತ್ತೀಚೆಗೆ ಗೋವಾದಲ್ಲಿ ಜರುಗಿದ ರಾಷ್ಟ್ರಮಟ್ಟದ ಮಾಸ್ಟರ್ಸ್ ಷಟಲ್ ಬ್ಯಾಡ್‍ಮಿಂಟನ್ ಪಂದ್ಯಾವಳಿಯಲ್ಲಿ 50 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕೊಡಗಿನ ಆಟಗಾರ್ತಿ ತರಬೇತುದಾರರೂ ಆಗಿರುವ ಜ್ಯೋತಿ ಸೋಮಯ್ಯ ಮೂರನೇ ಸ್ಥಾನಗಳಿಸಿದ್ದಾರೆ. ಈ ಸಾಧನೆಯೊಂದಿಗೆ ಅವರು ಆಗಸ್ಟ್ 4 ರಿಂದ 11 ರವರೆಗೆ ಪೋಲೆಂಡ್‍ನಲ್ಲಿ ಜರುಗಲಿರುವ ವಿಶ್ವಮಾಸ್ಟರ್ಸ್ ಬ್ಯಾಡ್‍ಮಿಂಟನ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದು, ಭಾರತವನ್ನು ಪ್ರತಿನಿಧಿಸಲಿದ್ದಾರೆ. ಜ್ಯೋತಿ ಸೋಮಯ್ಯ ಅವರು ಮಡಿಕೇರಿಯ ಕೂರ್ಗ್ ಫಿಟ್‍ನೆಸ್ ಸೆಂಟರ್‍ನ ಚೆಪ್ಪುಡಿರ ಪ್ರದೀಪ್ ಪೂವಯ್ಯ ಅವರಿಂದ ತಮ್ಮ ಜಿಮ್ ತರಬೇತಿಯನ್ನು ಪಡೆಯುತ್ತಿದ್ದಾರೆ.