ಗೋಣಿಕೊಪ್ಪ ವರದಿ, ಜೂ. 26 : ಚೀನಾದಲ್ಲಿ ನಡೆಯುವ ರಾಷ್ಟ್ರೀಯ ಸೇವಾ ಯೋಜನೆ ಯುವ ವಿನಿಮಯ ಶಿಬಿರಕ್ಕೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಸೇವಾ ಕಾರ್ಯಕರ್ತೆ ಎಸ್. ಶ್ವೇತಾ ಆಯ್ಕೆಯಾಗಿದ್ದಾರೆ.

ಭಾರತ ಸರ್ಕಾರದ ಕ್ರೀಡಾ ಮತ್ತು ಯುವಜನ ಸಚಿವಾಲಯ ಆಯೋಜಿಸುತ್ತಿರುವ ಈ ಶಿಬಿರವು ಚೀನಾ ದೇಶದ ಬೀಜಿಂಗ್, ಲ್ಯಾಂಜೂಡು, ದುನ್ಹುಹಾಂಗ್ ಪ್ರಮುಖ ನಗರಗಳಲ್ಲಿ ಜೂನ್ 30 ರಿಂದ ಜುಲೈ 10 ವರೆಗೆ ನಡೆಯಲಿದೆ.

ಶ್ವೇತಾ ಈ ಹಿಂದೆ ನವದೆಹಲಿಯಲ್ಲಿ ನಡೆದಿದ್ದ ಗಣರಾಜ್ಯೋತ್ಸವ ಪರೇಡ್‍ನಲ್ಲೂ ಭಾಗವಹಿಸಿದ್ದರು. ದ್ವಿತೀಯ ಬಿ.ಎಸ್‍ಸ್ಸಿ ವಿದ್ಯಾರ್ಥಿನಿಯಾಗಿದ್ದಾಳೆ.