ಮಡಿಕೇರಿ, ಜೂ. 26: ಮಡಿಕೇರಿ ಸನಿಹದ ಕೆ.ನಿಡುಗಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಮರಗಳನ್ನು ಕಡಿದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಸುಮಾರು 20 ದಿನಗಳು ಕಳೆದಿವೆ. ಇಲ್ಲಿ 800ಕ್ಕೂ ಅಧಿಕ ಮರಗಳನ್ನು ಕಡಿದುರುಳಿಸ ಲಾಗಿದ್ದು, ಈ ಜಾಗವನ್ನು ಅಭಿವೃದ್ಧಿ ಮಾಡಿದ ಮಡಿಕೇರಿ, ಜೂ. 26: ಮಡಿಕೇರಿ ಸನಿಹದ ಕೆ.ನಿಡುಗಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಮರಗಳನ್ನು ಕಡಿದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಸುಮಾರು 20 ದಿನಗಳು ಕಳೆದಿವೆ. ಇಲ್ಲಿ 800ಕ್ಕೂ ಅಧಿಕ ಮರಗಳನ್ನು ಕಡಿದುರುಳಿಸ ಲಾಗಿದ್ದು, ಈ ಜಾಗವನ್ನು ಅಭಿವೃದ್ಧಿ ಮಾಡಿದ ಉನ್ನತಾಧಿಕಾರಿಗಳಿಂದಲೂ ಸೂಚನೆ ಬಂದಿದ್ದು, ಇಲಾಖಾ ತನಿಖೆ ನಡೆಯುತ್ತಿದೆ. ಚಾರ್ಜ್‍ಶೀಟ್ ಸಲ್ಲಿಕೆಗೆ ಪಿಸಿಸಿಎಫ್ ಅವರಿಂದ ಸೂಚನೆ ಬಂದಿದೆ ಎನ್ನಲಾಗಿದ್ದು, ಪ್ರಕ್ರಿಯೆಗಳು, ತನಿಖೆಗಳು ಮುಂದುವರಿಯುತ್ತಿವೆ.
ಮರ ಕಡಿದವರು ಯಾರು...?ಸುಮಾರು 800 ಮರಗಳನ್ನು ಕಡಿಯಲು ಡಿ.ಎಫ್.ಓ. ಅವರು ಅನುಮತಿ ನೀಡಿದ್ದಾರೆ. ಈ ಅನುಮತಿಯಂತೆಯೇ ಮರಗಳನ್ನು ಕಡಿಯಲಾಗಿದೆ. ಆದರೆ ಇಲ್ಲಿ ಮರಕಡಿದವರು ಯಾರು ಎಂಬದು ಪ್ರಶ್ನೆಯಾಗಿದೆ. ಹಿರಿಯ ಅಧಿಕಾರಿ ಮರ ಕಡಿಯಲು, ಈ ಮರಗಳನ್ನು ಡಿಪೋಗೆ ಸಾಗಿಸಲು ಅನುಮತಿ ನೀಡಿರುವದು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗೆ ಅನುಮತಿ ನೀಡಲಾಗಿದ್ದರೂ, ಇಲಾಖೆ ಯವರಾದರೂ ಮರ ಕಡಿಯಲು ಟೆಂಡರ್ ಪ್ರಕ್ರಿಯೆ ನಡೆಸಬೇಕು... ಆದರೆ ಇಲ್ಲಿ ಟೆಂಡರ್ ಕರೆಯಲಾಗಿಲ್ಲ. ಸರಕಾರಕ್ಕೆ ನಷ್ಟವಾಗದಂತೆ ಜಾಗದ ಮಾಲೀಕರೇ ತಮ್ಮ ಖರ್ಚಿನಲ್ಲಿ ಮರ ಕಡಿದು ಡಿಪೋಗೆ ಸಾಗಿಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದ್ದರೂ, ಇದು ‘ಶಕ್ತಿ’ಗೆ ತಿಳಿದುಬಂದಂತೆ ದಾಖಲೆಯಲ್ಲಿ ಇಲ್ಲ. ಕೆಲವು ಖಚಿತ ಮೂಲಗಳ ಪ್ರಕಾರ ಇಲ್ಲಿ ಮರ ಕಡಿದದ್ದು ಸಂಬಂಧಿಸಿದ ಅರಣ್ಯ ಇಲಾಖೆಯವರೇ ಎನ್ನಲಾಗಿದೆ.
ಅನುಮತಿಗಿಂತಲೂ ಅಧಿಕಮರ
ಮರ ಕಡಿಯಲು ಅನುಮತಿ ನೀಡಿದ್ದ ಜಾಗದ ಹೊರತಾಗಿ ಸನಿಹದ ಮತ್ತೊಂದು ಸರ್ವೆ ನಂಬರ್‍ನ ಜಾಗದಲ್ಲೂ ಅನುಮತಿಗಿಂತ ಅಧಿಕವಾಗಿ ಸುಮಾರು 73 ಮರ ಗಳನ್ನು ಕಡಿಯಲಾಗಿದೆ. ಮತ್ತೊಂದು ಜಾಗದಲ್ಲಿ ಅನುಮತಿ ಹೊರತಾಗಿಯೂ ಮರ ಕಡಿದದ್ದು ಯಾವ ಆಧಾರದಲ್ಲಿ ಎಂಬದು ಮತ್ತೊಂದು ಪ್ರಶ್ನೆಯಾಗಿದೆ. ಇದು ಮಾತ್ರವಲ್ಲದೆ, ಪ್ರಕರಣ ಬಯಲಾದ ಬಳಿಕ ಇಲಾಕಾ ಸ್ಕ್ವಾಡ್ ಇನ್ನಷ್ಟು ಪರಿಶೀಲನೆ ನಡೆಸಿದ ಸಂದರ್ಭ ಮತ್ತೂ 50 ಮರಗಳನ್ನು ಅನಧಿಕೃತವಾಗಿ ಕಡಿಯಲು ನಂಬರ್ ಹಾಕಲಾಗಿತ್ತು ಎನ್ನಲಾಗಿದೆ.
ಐದು ದಿನಗಳ ಬಳಿಕ ಎಫ್.ಐ.ಆರ್.
ಜೂನ್ 5ರಂದು ಈ ಮರ ಹನನ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಎಫ್.ಐ.ಆರ್. ಆಗಿರುವದು ಮತ್ತೆ ಐದು ದಿನ ವಿಳಂಬವಾಗಿ. ಅದೂ ಎಫ್.ಐ.ಆರ್. ಆಗಿರುವದು ಡೆವಲಪರ್ ಮೇಲೆ ಹಾಗೂ ಕೂಲಿ ಕೆಲಸಕ್ಕೆ ತೊಡಗಿಸಿಕೊಂಡಿದ್ದ ನಾಪೋಕ್ಲು ಮೂಲದ ವ್ಯಕ್ತಿಯೊಬ್ಬರ ಮೇಲೆ. ಟೆಂಡರ್ ಕರೆಯದೆ ಇಲಾಖೆ ಯವರು ಮರ ಕಡಿದದ್ದು ಒಂದು ತಪ್ಪು. ಇದರೊಂದಿಗೆ ಅನುಮತಿ ನೀಡದಿದ್ದ ಜಾಗದಲ್ಲಿ ಹೆಚ್ಚುವರಿ ಯಾಗಿ ಇನ್ನಷ್ಟು ಮರಗಳನ್ನು ಕಡಿದಿರುವದು ಹೇಗೆ... ಇಲಾಖೆ ಯವರೇ ಮರ ಕಡಿದಿದ್ದರೂ ಸಣ್ಣ ಕೇಸ್ ಹಾಕಿರುವದು ಅದೂ ಕೆಲವು. ದಿನ ತಡವಾಗಿ ಮತ್ತೊಬ್ಬರ ಮೇಲೆ ಮಾಲೀಕರ ಮೇಲೆ ಕೇಸು ಹಾಕುವದಿದ್ದಲ್ಲಿ ಗೃಹ ಮಂಡಳಿ ವಿರುದ್ಧ ಆಗಬೇಕಿತ್ತು. ಇದರಲ್ಲಿ ಸತ್ಯಾಂಶವೇನಿತ್ತು ಎಂಬ ಪ್ರಶ್ನೆಗೆ ಕಾರಣವಾಗಿದೆ. ಸದ್ಯದ ಮಟ್ಟಿಗೆ ಇಲಾಖಾ ತನಿಖೆ ನಡೆಯುತ್ತಿದೆ. ಡಿ.ಎಫ್.ಓ. ಅಮಾನತು ಗೊಂಡಿದ್ದಾರೆ. ಸದ್ಯದಲ್ಲೇ ಚಾರ್ಜ್‍ಶೀಟ್ ಕೂಡ ಸಲ್ಲಿಕೆ ಯಾಗಲಿದೆ. ಆದರೆ ಇದರಲ್ಲಿ ಉಲ್ಲೇಖವಾಗಿರಬಹುದಾದ ನೈಜಾಂಶ ಗಳೇನು ಎಂಬದು ಉಲ್ಲೇಖವಾಗಿರ ಬಹುದು ಇನ್ನೂ ಕಗ್ಗಂಟಾಗಿ ಉಳಿದಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಇದರ ಮಾಲೀಕತ್ವ ಪಡೆದಿರುವ ಕರ್ನಾಟಕ ಗೃಹನಿರ್ಮಾಣ ಮಂಡಳಿ ಮಾತ್ರ ಇದುವರೆಗೂ ಯಾವದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುವದು ಪ್ರಶ್ನಾರ್ಹವಾಗಿದೆ.!