ಸುಂಟಿಕೊಪ್ಪ, ಜೂ. 26: ಜಿಲ್ಲಾ ಕಾರ್ಮಿಕರ ಮತ್ತು ಚಾಲಕರ ಸಂಘದ ನೂತನ ಅಧ್ಯಕ್ಷರಾಗಿ ಕೊಡಗರಹಳ್ಳಿಯ ರಫೀಕ್ ಆಯ್ಕೆಯಾದರು.

ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ರಮೇಶ್ ರೈ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಅಣ್ಣಾ ಶರೀಫ್ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಉಪಾಧ್ಯಕ್ಷರಾಗಿ ಮಹೇಶ್ ಕುಶಾಲನಗರ ಮತ್ತು ಕುಮಾರ ಗುಡ್ಡೆಹೊಸೂರು, ಪ್ರಧಾನ ಕಾರ್ಯದರ್ಶಿಯಾಗಿ ಸುಂಟಿಕೊಪ್ಪದ ವಿವೇಕ್ ರೈ, ಖಜಾಂಚಿಯಾಗಿ ಶಶಿ ಹೊರೂರು, ಸಹ ಕಾರ್ಯದರ್ಶಿಯಾಗಿ ನಾಸಿರ್ ಹೊಸಕೋಟೆ, ಅಣ್ಣಪ್ಪ ಮುಳ್ಳುಸೋಗೆ, ಸಂಘಟನಾ ಕಾರ್ಯದರ್ಶಿಯಾಗಿ ಸಾಜಿ ಬೈಲುಕೊಪ್ಪ, ಗೌರವಾಧ್ಯಕ್ಷರಾಗಿ ಬಿ.ಆರ್. ರಮೇಶ್ ರೈ, ಬಾಬು, ಹೈದ್ರೋಸ್, ಸದಸ್ಯರುಗಳಾಗಿ ನೌಶಾದ್, ಸುಜಿ, ಸೂರಿ, ಮಧು, ಚಂದ್ರಶೇಖರ್, ಆಸೀಸ್, ಶರವಣ, ಬೋಪಣ್ಣ, ಮಂಜೇಶ್, ಮುತ್ತು, ರವಿ ಅವರುಗಳನ್ನು ಆಯ್ಕೆ ಮಾಡಲಾಯಿತು. ವಾರ್ಷಿಕ ಲೆಕ್ಕಪತ್ರವನ್ನು ವಿವೇಕ್ ರೈ ಮಂಡಿಸಿದರು.