ವೀರಾಜಪೇಟೆ, ಜೂ. 26 : ವೀರಾಜಪೇಟೆ ಪುರಸಭಾ ಸದಸ್ಯರಾಗಿ ಸೇವೆ ಸಲ್ಲಿಸಿ ನಿಧನ ಹೊಂದಿದ ವಕೀಲ ಸಿ.ಎಚ್. ಕರುಣಾಕರನ್ ಅವರ ಸ್ಮರಣಾರ್ಥ ಸಂತಾಪ ಸಭೆ ಏರ್ಪಡಿಸಲಾಗಿತ್ತು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನುದ್ದೇಶಿಸಿ ಸದಸ್ಯರಾದ ಎಸ್.ಎಚ್. ಮತೀನ್, ಡಿ.ಪಿ.ರಾಜೇಶ್, ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿದರು. ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ, ಸದಸ್ಯರುಗಳಾದ ಜೂನಾ, ಯಶೋಧ, ಪೂರ್ಣಿಮಾ, ಪಟ್ಟಡ ರಂಜಿ ಪೂಣಚ್ಚ, ಮಹಮ್ಮದ್ ರಾಫಿ ಸುಭಾಶ್, ಬೆನ್ನಿ, ರಜನಿಕಾಂತ್ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.

ಮೃತರ ಗೌರವಾರ್ಥ ಬಂದ್ : ಮೃತರ ಗೌರವಾರ್ಥ ನಿನ್ನೆ ಸಂಜೆ ಐದು ಗಂಟೆಯಿಂದ ಆರು ಗಂಟೆಯವರೆಗೆ ವೀರಾಜಪೇಟೆ ಪಟ್ಟಣದಲ್ಲಿ ಬಂದ್ ಮಾಡಲಾಗಿತ್ತು.

ನ್ಯಾಯಾಲಯದಲ್ಲಿ ಸಂತಾಪ : ಹಿರಿಯ ವಕೀಲ ಕರುಣಾಕರನ್ ನಿಧನದ ಪ್ರಯುಕ್ತ ವೀರಾಜಪೇಟೆ ಸಮುಚ್ಚಯ ನ್ಯಾಯಾಲಯದಲ್ಲಿ ವಕೀಲರ ಸಂಘದಿಂದ ಸಂತಾಪ ವ್ಯಕ್ತಪಡಿಸಲಾಯಿತು. ಸಂತಾಪ ಸಭೆಯನ್ನುದ್ದೇಶಿಸಿ ಹಿರಿಯ ವಕೀಲರಾದ ಎಂ.ಕೆ. ಪೂವಯ್ಯ, ಎನ್.ಜಿ. ಕಾಮತ್ ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಮಾತನಾಡಿದರು. ಸಭೆಯಲ್ಲಿ ನ್ಯಾಯಾಧೀಶರುಗಳಾದ ಬಿ.ಜಿ. ರಮಾ, ಜಯಪ್ರಕಾಶ್, ಶಿವಾನಂದ ಲಕ್ಷ್ಮಣ್ ಅಂಚಿ ಹಾಗೂ ಕೋನಪ್ಪ ಭಾಗವಹಿಸಿದ್ದರು.