ಮಡಿಕೇರಿ, ಜೂ. 26: ಸೋಮವಾರಪೇಟೆ ತಾಲೂಕು ಶನಿವಾರಸಂತೆ ಹೋಬಳಿ ಗೋಪಾಲಪುರ ಗ್ರಾಮದ ಇ.ಎಂ.ಇಸ್ಮಾಯಿಲ್ ಎಂಬವರು ಅವರ ವಾಸದ ಮನೆಯಲ್ಲಿ ಶ್ರೀಗಂಧವನ್ನು ಇಟ್ಟುಕೊಂಡು ವ್ಯಾಪಾರಿಗಳಿಗಾಗಿ ಹುಡುಕಾಟ ನಡಸುತಿರುವದಾಗಿ ಸಿಕ್ಕಿದ ಖಚಿತ ವರ್ತಮಾನದ ಮೇರೆಗೆ ವ್ಯಾಪಾರಸ್ಥರ ಸೋಗಿನಲ್ಲಿ ಧಾಳಿ ನಡೆಸಿ ಆರೋಪಿ ವಶದಲ್ಲಿದ್ದ ಒಟ್ಟು 17 ಕೆಜಿ 910 ಗ್ರಾಂ ನಷ್ಟು ಶ್ರೀ ಗಂಧದ ಕೊರಡು ಹಾಗೂ ಚಕ್ಕೆಯನ್ನು ವಶ ಪಡಿಸಿಕೊಂಡು ಆರೋಪಿಯ ಮೇಲೆ ಸೋಮವಾರಪೇಟೆ ಪೊಲೀಸ್ ಅರಣ್ಯ ಸಂಚಾರಿ ದಳದ ಕಚೆÉೀರಿ ಈಔಅ ಸಂಖ್ಯೆ 15/2019 ಕಲಂ: 84, 86, 87 ಏಈ ಂಛಿಣ ಖ/W 379 IPಅ ರೀತಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮುಂದಿನ ತನಿಖೆ ಬಗ್ಗೆ ಪೊಲೀಸ್ ನಿರೀಕ್ಷಕರು ಶನಿವಾರಸಂತೆ ಪೊಲೀಸ್ ಠಾಣೆಗೆ ಸ್ವತ್ತು, ಕಡತ ಹಾಗೂ ಆರೋಪಿಯನ್ನು ಹಸ್ತಾಂತರಿ ಸಲಾಯಿತು. ವಶಪಡಿಸಿಕೊಂಡ ಸ್ವತ್ತಿನ ಮೌಲ್ಯ 1 ಲಕ್ಷ ಎಂದು ಅಂದಾಜಿಸಲಾಗಿದೆ.ಸಿಐಡಿ ಅರಣ್ಯ ಘಟಕದ ಎಸ್.ಪಿ. ಕಾಶಿಯವರ ಮಾರ್ಗ ದರ್ಶನದಲ್ಲಿ ಎಸ್.ಐ. ಚನ್ನಕೇಶವಯ್ಯ ಎ ಎಸ್ ಐ ಎನ್.ಟಿ. ತಮ್ಮಯ್ಯ ಸಿಬ್ಬಂದಿಗಳಾದ ಚಂಗಪ್ಪ, ಹರ್ಷಿತ್, ಸೋಮಣ್ಣ, ಮಂಜುನಾಥ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.