ಸುಂಟಿಕೊಪ್ಪ, ಜೂ. 26: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2019-2020ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಕಾಲೇಜಿನ ಮತದಾರರ ಸಾಕ್ಷರತಾ ಸಂಘದ ವತಿಯಿಂದ ಮಾದರಿ ಮತದಾನ ಮಾಡುವ ಮೂಲಕ ನಡೆಸಲಾಯಿತು.

ಕಾಲೇಜು ನಾಯಕರಾಗಿ ಜಗನ್, ರಹೀಲ, ಕ್ರೀಡಾ ನಾಯಕರಾಗಿ ಶಶಿಕುಮಾರ್, ನಿಶ್ಚಿತಾ ಹಾಗೂ ಸಾಂಸ್ಕøತಿಕ ನಾಯಕರಾಗಿ ರಸೀನಾ, ಇರ್ಫಾನ್, ತೋಟಗಾರಿಕಾ ನಾಯಕನಾಗಿ ಇರ್ಫಾನ್, ಸ್ವಚ್ಛತಾ ನಾಯಕರಾಗಿ ಪವನ್, ಸೃಜನ್, ತೋಟಗಾರಿಕಾ ನಾಯಕನಾಗಿ ಅಮೀರ್ ಇವರುಗಳನ್ನು ಮತದಾನ ಮಾಡುವ ಮೂಲಕ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪಿ.ಎಸ್. ಜಾನ್ ವಹಿಸಿದ್ದರು. ಉಪನ್ಯಾಸಕ ಬಿ.ಎಂ. ಬೆಳ್ಯಪ್ಪ ಪ್ರಾಸ್ತಾವಿಕ ನುಡಿಯಾಡಿದರು. ಉಪನ್ಯಾಸಕಿ ಕೆ.ಸಿ. ಕವಿತ ಮತದಾರರ ಸಾಕ್ಷರತಾ ಸಂಘದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು. ಉಪನ್ಯಾಸಕ ಎಸ್.ಹೆಚ್. ಈಶ ಇತರರು ಹಾಜರಿದ್ದರು.