ಕುಶಾಲನಗರ, ಜೂ. 26: ಕುಶಾಲನಗರ ಅತ್ತೂರು ಅರಣ್ಯ ವಲಯದಲ್ಲಿ ಕಾಡಿನಿಂದ ಬಂದ ನವಜಾತ ಹೆಣ್ಣಾನೆ ಮರಿಯೊಂದು ಕೆರೆಯಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕುಶಾಲನಗರ-ಮಡಿಕೇರಿ ರಸ್ತೆ ಅಂಚಿನಲ್ಲಿರುವ ಅರಣ್ಯದ ಕೆರೆಯಲ್ಲಿ ಮರಿಯ ಮೃತದೇಹ ಪತ್ತೆಯಾಗಿದೆ ಎಂದು ವಲಯ ಅರಣ್ಯಾಧಿಕಾರಿ ಅರುಣ್ ತಿಳಿಸಿದ್ದಾರೆ.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್, ಉಪ ವಲಯ ಅರಣ್ಯಾಧಿಕಾರಿ ರಂಜನ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಕೆರೆಯಿಂದ ಮರಿಯನ್ನು ಹೊರತೆಗೆದು ಅಂತ್ಯಕ್ರಿಯೆ ನೆರವೇರಿಸಿದರು.