ಪರಿಸರ ತಾಣ ಜಾರಿಯಾಗದಿರಲಿ
ಮಡಿಕೇರಿ, ಜೂ. 26: ಯಾವದೇ ಖಾಸಗಿ ಜಮೀನು, ಆಸ್ತಿ, ತೋಟ ಪ್ರದೇಶಗಳಲ್ಲಿ ಸೂಕ್ಷ್ಮ ಪರಿಸರ ತಾಣ ನಿರ್ಬಂಧ ಜಾರಿಯಾಗದಿರಲಿ ಎಂದು ವೈಲ್ಡ್ ಲೈಫ್ ಸಂಸ್ಥೆ ಸಲಹೆ ನೀಡಿದೆ.
ಪೊನ್ನಂಪೇಟೆ, ಪಿರಿಯಾಪಟ್ಟಣ ಮತ್ತು ಹುಣಸೂರು ಪ್ರದೇಶಗಳÀಲ್ಲಿ ಸೂಕ್ಷ್ಮ ಪರಿಸರ ತಾಣ ನಿರ್ಬಂಧ ಜಾರಿಯಾಗಿರುವ ಕುರಿತು ಪ್ರÀಚಾರಗಳ ಬಗ್ಗೆ ಸಂಸ್ಥೆಯ ಪರವಾಗಿ ಟ್ರಸ್ಟಿಗಳಾದ ಕೆ.ಎಂ. ಚಿಣ್ಣಪ್ಪ ಹಾಗೂ ತಮ್ಮು ಪೂವಯ್ಯ ಇವರುಗಳು ಸಮಜಾಯಿಷಿಕೆಯಿತ್ತಿದ್ದಾರೆ.
ಹುಲಿ ಸಂರಕ್ಷಣೆಗಾಗಿ ಸೂಕ್ಷ್ಮ ಪರಿಸರ ತಾಣ ನಿರ್ಬಂಧ ಹೇರಲ್ಪಟ್ಟ್ಟಿರುವದು ಕೇವಲ ಅರಣ್ಯ ಪ್ರದೇಶದಲ್ಲಿ ಹಾಗೂ ಮುಖ್ಯವಾಗಿ ಹುಲಿಗಳು ವಾಸಿಸುವ ಪ್ರದೇಶಗಳಲ್ಲ್ಲಿ ಮಾತ್ರ ಅನ್ವಯವಾಗುತ್ತದೆಯೇ ಹೊರತು ಖಾಸಗಿ ಭೂಮಿ, ಪ್ಲಾಂಟೇಷನ್ ಬೆಳೆ ಪ್ರದೇಶ ಹಾಗೂ ಪೊನ್ನಂಪೇಟೆಯಂತಹ ಪಟ್ಟಣ ಪ್ರದೇಶಗಳಲ್ಲಿ ಅನ್ವಯವಾಗದು ಎಂದಿದ್ದಾರೆ. ಅಂತಹ ಸಂದರ್ಭ ಬಂದರೆ, ವೈಲ್ಡ್ ಲೈಫ್ ಫಸ್ಟ್ ಸಂಸ್ಥೆ ಸರಕಾರದೊಂದಿಗೆ ವ್ಯವಹರಿಸಲಿರುವದಾಗಿ ಟ್ರಸ್ಟಿಗಳು ಭರವಸೆಯಿತ್ತಿದ್ದಾರೆ.