ಗೋಣಿಕೊಪ್ಪ ವರದಿ, ಜೂ. 25: ಹಾಕಿ ಇಂಡಿಯಾ ವತಿಯಿಂದ ಚತ್ತೀಸ್‍ಘಡ್ ಬಿಸ್ಲಾಪುರದಲ್ಲಿ ನಡೆಯುತ್ತಿರುವ ಸಬ್ ಜೂನಿಯರ್ ಬಾಲಕರ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡವು ತೆಲಂಗಾಣ ವಿರುದ್ಧ ಗೆಲ್ಲುವ ಮೂಲಕ ಟೂರ್ನಿ ಯಲ್ಲಿ 2 ನೇ ಗೆಲವು ದಾಖಲಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ತೆಲಂಗಾಣವನ್ನು 5-2 ಗೋಲು ಗಳಿಂದ ಮಣಿಸಿತು. ಕೂರ್ಗ್ ಪರ 5 ಹಾಗೂ 28 ನೇ ನಿಮಿಷಗಳಲ್ಲಿ ದಿವಾನ್ ಸುಬ್ಬಯ್ಯ 2 ಗೋಲು ಹೊಡೆದರು. 22 ರಲ್ಲಿ ದರ್ಶನ್ ಪೊನ್ನಣ್ಣ, 28 ರಲ್ಲಿ ಬಿ. ಆರ್. ಬಿಪಿನ್, 55 ರಲ್ಲಿ ಕಿರಣ್ ಕುಮಾರ್ ಗೋಲು ಹೊಡೆದರು.