ಮಡಿಕೇರಿ, ಜೂ. 25: ಮಡಿಕೇರಿಯ ವೇದಾಂತ ಸಂಘದಲ್ಲಿ ಪ್ರತಿದಿನ ಸಂಜೆ 5 ರಿಂದ 6.30 ರವರೆಗೆ ಹಾಗೂ ಕುಶಾಲ ನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಸಂಜೆ 7ರ ಬಳಿಕ ಉಪನಿಷತ್ ಬಗ್ಗೆ ವಿದ್ವಾಂಸರಿಂದ ಪ್ರವಚನ ಆರಂಭಗೊಂಡಿದ್ದು, ತಾ. 28 ರವರೆಗೆ ಮುಂದುವರಿಯಲಿದ್ದು, ತಾ. 29 ರಂದು ಹಾಸನದ ಶ್ರೀ ಸೀತಾರಾಮಾಂಜನೇಯ ದೇಗುಲದಲ್ಲಿ ಭಾಷ್ಯಾಮೃತ ವಾಹಿನಿ ಸಮಾವೇಶ ನಡೆಯಲಿದೆ. ಅಂದು ಶ್ರೀ ಶಂಕರ ಭಾರತೀ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.