ಮಡಿಕೇರಿ ಜೂ.25 :ಪೆÇನ್ನಂಪೇಟೆಯ ಶಾಫಿ ಜುಮಾ ಮಸೀದಿಯ ಪÀÅನರ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ, ಮಜ್ಲಿಸುನ್ನೂರ್ ವಾರ್ಷಿಕ ಹಾಗೂ ಮತಪ್ರವಚನ ಕಾರ್ಯಕ್ರಮ ತಾ.27 ರಂದು (ನಾಳೆ) ನಡೆಯಲಿದೆ ಎಂದು ಎಸ್‍ಕೆಎಸ್‍ಎಸ್‍ಎಫ್‍ನ ಪೊನ್ನಂಪೇಟೆ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎ. ಸಾಜೀರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4 ಗಂಟೆಗೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಅಸ್ಸಯ್ಯಿದ್ ಜಿಫ್ರ್ರಿ ಮುತ್ತುಕ್ಕೋಯ ತಙÐಲ್ ಉದ್ಘಾಟಿಸಲಿದ್ದಾರೆಂದು ಮಾಹಿತಿ ನೀಡಿದರು.
ಅಂದು ಸಂಜೆ 5 ಗಂಟೆಗೆ ಕೇರಳದ ಖ್ಯಾತ ವಾಗ್ಮಿ ಬಹು ಉಸ್ತಾದ್ ಮುಸ್ತಫ ಹುದವಿ ಆಕೋಡ್‍ರವರಿಂದ ಮತ ಪ್ರವಚನ ಕಾರ್ಯಕ್ರಮ ಮಸೀದಿ ಸಭಾಂಗಣದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಸ್ತ ಕೇರಳದ ಕೇಂದ್ರ ಮುಶಾವರ ಸಮಿತಿಯ ಸದಸ್ಯ ಎಂ. ಎಂ. ಅಬ್ದುಲ್ ಫೈಜಿ ವಹಿಸಲಿದ್ದಾರೆಂದು ತಿಳಿಸಿದರು.
ಅಂದು ರಾತ್ರಿ 7.30ಗಂಟೆಗೆ ಬಹು ಸಯ್ಯಿದ್ ನಜ್ಮುದ್ದೀನ್ ಪೂಕೋಯ ತಙÐಲ್ ಅಲ್ ಹೈದ್ರೋಸಿ ಅಲ್ ಯಮಾನಿ ಅವರ ನೇತೃತ್ವದಲ್ಲಿ ಮಜ್ಲಿಸುನ್ನೂರ್ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಎಸ್‍ಕೆಜೆಎಂಸಿಸಿ ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮುಸ್ಲಿಯಾರ್, ಎಸ್‍ಕೆಎಸ್‍ಎಸ್‍ಎಫ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಆರಿಫ್ ಫೈಝಿ ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಇಬ್ರಾಹಿಂ ಮಾಸ್ಟರ್, ಬಶೀರ್ ಹಾಜಿ, ಉಸ್ಮಾನ್ ಹಾಜಿ, ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ಕೆ.ಎ ಯಾಕೂಬ್, ಪಿ.ಸಿ.ಹಸೈನಾರ್, ಡಿ.ಎಚ್.ಎಸ್. ಸೂಫಿ ಸೇರಿದಂತೆ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.
ಎಸ್‍ಕೆಎಸ್‍ಎಸ್‍ಎಫ್‍ನ ಉಪಾಧ್ಯಕ್ಷ ತಮ್ಲಿಕ್ ದಾರಿಮಿ ಮಾತನಾಡಿ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಂಘಟನೆ ದೇಶ ವಿದೇಶಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಹೊಂದಿದೆ. ಇದರ ವ್ಯಾಪ್ತಿಯಲ್ಲಿ 10 ಸಾವಿರ ಮದರಸಗಳು ಕಾರ್ಯನಿರ್ವಹಿಸುತ್ತಿದ್ದು, 12 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 1 ಲಕ್ಷ ಅಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದಾರೆಂದು ಮಾಹಿತಿ ನೀಡಿದರು.
ಮಸೀದಿ ಪುನರ್ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮದ ದಿನದಂದು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಕೂಡ ನಡೆಯಲಿದೆಯೆಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಂ. ಮೊಹಮ್ಮದ್ ಹಾಜಿ, ಪ್ರಧಾನ ಕಾರ್ಯದರ್ಶಿ ಪಿ.ಎ ಅಝೀಜ್, ಎಸ್‍ಕೆಐಎಂವಿಬಿ ಕೇಂದ್ರ ಸಮಿತಿ ಸದಸ್ಯ ಉಮ್ಮರ್ ಫೈಝಿ, ಶಾಫಿ ಜುಮಾ ಮಸೀದಿ ಖತೀಬರಾದ ಮೊಹಮ್ಮದ್ ಅಜರಿ ಉಪಸ್ಥಿತರಿದ್ದರು.