ಕೂಡಿಗೆ, ಜೂ. 25 : ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯ್ತಿಗೆ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಭೇಟಿ ನೀಡಿ, ಗ್ರಾಮಸ್ಥರು, ಅಂಗನವಾಡಿ, ವಸತಿ ನಿಲಯಗಳ ಮೇಲ್ವಿಚಾರಕರ ಮತ್ತು ಶಾಲಾ ಮುಖ್ಯಸ್ಥರ ಅಹವಾಲುಗಳನ್ನು ಸ್ವೀಕರಿಸಿದರು. ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುದುಗೂರು ಗ್ರಾಮದಲ್ಲಿ 350ಕ್ಕೂ ಹೆಚ್ಚು ನಿವೇಶನ ರಹಿತರಿಗೆ ಈಗಾಗಲೇ ಕಾದಿರಿಸಿರುವ 15 ಎಕರೆ ಪ್ರದೇಶದಲ್ಲಿ ಕಳೆದ 10 ವರ್ಷಗಳಿಂದ ತಮ್ಮ ಸ್ವ ಪ್ರತಿಷ್ಠೆಯ ಕಾರಣದಿಂದ ನಿವೇಶನ ಕಲ್ಪಿಸದೆ ಇರುವದು ಸರಿಯಾದ ಕ್ರಮವಲ್ಲ. ಅತೀ ಶೀಘ್ರವಾಗಿ ನಿವೇಶನವನ್ನು ನಿವೇಶನ ಕೂಡಿಗೆ, ಜೂ. 25 : ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯ್ತಿಗೆ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಭೇಟಿ ನೀಡಿ, ಗ್ರಾಮಸ್ಥರು, ಅಂಗನವಾಡಿ, ವಸತಿ ನಿಲಯಗಳ ಮೇಲ್ವಿಚಾರಕರ ಮತ್ತು ಶಾಲಾ ಮುಖ್ಯಸ್ಥರ ಅಹವಾಲುಗಳನ್ನು ಸ್ವೀಕರಿಸಿದರು.

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುದುಗೂರು ಗ್ರಾಮದಲ್ಲಿ 350ಕ್ಕೂ ಹೆಚ್ಚು ನಿವೇಶನ ರಹಿತರಿಗೆ ಈಗಾಗಲೇ ಕಾದಿರಿಸಿರುವ 15 ಎಕರೆ ಪ್ರದೇಶದಲ್ಲಿ ಕಳೆದ 10 ವರ್ಷಗಳಿಂದ ತಮ್ಮ ಸ್ವ ಪ್ರತಿಷ್ಠೆಯ ಕಾರಣದಿಂದ ನಿವೇಶನ ಕಲ್ಪಿಸದೆ ಇರುವದು ಸರಿಯಾದ ಕ್ರಮವಲ್ಲ. ಅತೀ ಶೀಘ್ರವಾಗಿ ನಿವೇಶನವನ್ನು ನಿವೇಶನ ಗ್ರಾಮಸ್ಥರು ತಮ್ಮ ಗ್ರಾಮದ ಸಮಸ್ಯೆಗಳನ್ನು ವಿಧಾನ ಪರಿಷತ್ ಸದಸ್ಯರ ಮುಂದೆ ಹೇಳಿಕೊಂಡರು. ಕೂಡಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮಸ್ಥರು (ಮೊದಲ ಪುಟದಿಂದ) ಮತ್ತು ಗ್ರಾ.ಪಂ. ಸದಸ್ಯರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಪ್ರಕೃತಿ ವಿಕೋಪದ ಸಂದರ್ಭ ಮೊದಲನೇ ವಾರ್ಡಿನ 150ಕ್ಕೂ ಮನೆಗಳಿಗೆ ಹಾರಂಗಿ ಅಣೆಕಟ್ಟೆಯ ನೀರು ನುಗ್ಗಿ ಭಾರಿ ಹಾನಿಯಾಗಿವೆ. ಪ್ರಕೃತಿ ವಿಕೋಪದ ಪರಿಹಾರವಾಗಿ ತಲಾ 1300 ರೂ. ಗಳನ್ನು ನೀಡಿರುವದನ್ನು ಬಿಟ್ಟರೆ ಯಾವದೇ ರೀತಿಯ ಪರಿಹಾರ ನೀಡಿಲ್ಲ ಎಂದು ಪ್ರಕೃತಿ ವಿಕೋಪ ಸಂತ್ರಸ್ತರಾದ ದೇವಕಿ ಗೋಪಾಲ್, ರಾಜಮ್ಮ, ಜಯಲಕ್ಷ್ಮಿ, ಅಬಿಸಾ ತಮ್ಮ ಅಳಲನ್ನು ತೋಡಿಕೊಂಡರು.

ಇದಕ್ಕೆ ಸಂಬಂಧಪಟ್ಟಂತೆ ಯಾವ ಮಟ್ಟದಲ್ಲಿ ಕಡತಗಳು ಇವೆ ಎಂಬದನ್ನು ತಕ್ಷಣ ಪರಿಶೀಲಿಸಿ ಪರಿಹಾರವನ್ನು ಕೊಡಿಸಲು ಪ್ರಮಾಣಿಕವಾಗಿ ಪ್ರಯತ್ನಿಸುವದಾಗಿ ಸಭೆಯಲ್ಲಿ ಸುನೀಲ್ ಸುಬ್ರಮಣಿ ತಿಳಿಸಿದರು. ನಂತರ ಸ್ಥಳೀಯ ಗ್ರಾಮಸ್ಥರು ಕಾವೇರಿ-ಹಾರಂಗಿ ಸಂಗಮದ ಸ್ಥಳದಲ್ಲಿ ರಸ್ತೆ ಇಲ್ಲದಿರುವದು ಮತ್ತು ತೆರಳುವ ದಾರಿಯು ವ್ಯವಸಾಯಕ್ಕೆ ಬಳಸಿಕೊಂಡಿರುವದರಿಂದ ಸಂಬಂಧ ಪಟ್ಟವರೊಂದಿಗೆ ಚರ್ಚೆ ನಡೆಸಿ ಸಂಗಮಕ್ಕೆ ಹೋಗುವ ರಸ್ತೆಯನ್ನು ಮತ್ತು ಸೋಪಾನ ಕಟ್ಟೆಯನ್ನು ನಿರ್ಮಿಸಿಕೊಡಬೇಕೆಂದು ವಿನಂತಿಸಿ ದರು. ಈ ಬಗ್ಗೆ ಅಗತ್ಯ ಕ್ರಮದ ಭರವಸೆ ನೀಡಲಾಯಿತು. ಬ್ಯಾಡಗೊಟ್ಟ ಗ್ರಾಮದಲ್ಲಿರುವ ಜಾಗದಲ್ಲಿ ಗ್ರಾಮ ಪಂಚಾಯಿತಿಗೆ ಇನ್ನು ಹೆಚ್ಚಿನ ಜಾಗವನ್ನು ನೀಡಿದಲ್ಲಿ ಕಸವಿಲೇವಾರಿ ಮತ್ತು ನಿವೇಶನ ರಹಿತರಿಗೆ ನೀಡಲು ಗ್ರಾ.ಪಂ. ಅಧ್ಯಕ್ಷೆ ಕೋರಿದರು.

ಗ್ರಾ.ಪಂ. ವ್ಯಾಪ್ತಿಯ 11 ಅಂಗನವಾಡಿ ಕೇಂದ್ರಗಳಲ್ಲಿ ಕೆಲವು ಅಂಗನವಾಡಿ ಕೇಂದ್ರಗಳು ತಡೆಗೋಡೆ ಮತ್ತು ಅಂಗನವಾಡಿ ಕಟ್ಟಡದ ಮೇಲ್ಚಾವಣಿ ಹಾನಿಯಾಗಿ ರುವದರಿಂದ, ದುರಸ್ತಿ ಕಾರ್ಯ ಮಾಡಿಸಬೇಕು ಎಂದು ಅಂಗನವಾಡಿ ಕೇಂದ್ರದ ಸಹಾಯಕಿಯರು ಮನವಿ ಮಾಡಿಕೊಂಡರು. ನೀರಿನ ವ್ಯವಸ್ಥೆಯು ಸಮರ್ಪಕವಾಗಿ ಇಲ್ಲದೆ, ಖಾಸಗಿಯವರಿಗೆ ಗ್ರಾಮ ಪಂಚಾಯ್ತಿ ಹಣ ನೀಡಿ ನೀರನ್ನು ಪಡೆದು ಪೈಪ್‍ಗಳ ಮೂಲಕ ಗ್ರಾಮಸ್ಥರಿಗೆ ಒದಗಿಸುತ್ತಿದೆ. ಇದರಿಂದ ಹಣ ವ್ಯಯವಾಗುತ್ತಿದೆ. ಈಗಿರುವ ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿದಿರುವದರಿಂದ ಬದಲಿ ಕೊಳವೆ ಬಾವಿಯನ್ನು ಕೊರೆಸಿ ಸಂಪರ್ಕ ಕಲ್ಪಸಿಕೊಟ್ಟು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಹಕಾರ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಮನವಿ ಮಾಡಿದರು.

ಅಹವಾಲುಗಳನ್ನು ಸ್ವೀಕರಿಸಿದ ಸುನೀಲ್ ಸುಬ್ರಮಣಿ ಅವರು, ಕುಡಿಯುವ ನೀರಿನ ಯೋಜನೆಯ ಬಗ್ಗೆ ಮತ್ತು ಮನೆ ನಿರ್ಮಾಣ ಮಾಡುವ ಜಾಗದ ಸಮರ್ಪಕ ಮಾಹಿತಿಯನ್ನು ಒಂದು ವಾರದೊಳಗೆ ಒದಗಿಸುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.

ಗ್ರಾಮಸ್ಥರ ಎಲ್ಲಾ ಕುಂದುಕೊರತೆ ಗಳನ್ನು ಆಲಿಸಿ ಹಂತ ಹಂತವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವದಾಗಿ ಅವರು ಭರವಸೆ ನೀಡಿದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ, ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವದಾಗಿ ನುಡಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪರಾಜೇಶ್, ಸ್ಥಾನೀಯ ಸಮಿತಿಯ ಅಧ್ಯಕ್ಷೆ ತಂಗಮ್ಮ, ಸದಸ್ಯೆ ಸಬಿತಾ ಚನ್ನಕೇಶವ, ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್‍ಕುಮಾರ್, ಕಾರ್ಯನಿರ್ವಹಣಾಧಿಕಾರಿ ಸುನೀಲ್‍ಕುಮಾರ್, ಕಾರ್ಯದರ್ಶಿ ಶಿಲ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.