ಸೋಮವಾರಪೇಟೆ, ಜೂ. 25: ಇತ್ತೀಚೆಗೆ ಶಾಂತಳ್ಳಿಯಲ್ಲಿ ನಡೆದ ಏಳನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾದ ಹಿನ್ನೆಲೆ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಆವರಣದಲ್ಲಿ ಕೃತಜ್ಞತಾ ಸಭೆ ನಡೆಯಿತು.
ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಜಿ. ಮೇದಪ್ಪ ಅವರು ಲೆಕ್ಕಪತ್ರ ಮಂಡಿಸಿದರು. ನಂತರ ಮಾತನಾಡಿ, ಗ್ರಾಮೀಣ ಜನತೆಯ ಸಹಕಾರದಿಂದ ಕನ್ನಡ ಹಬ್ಬವನ್ನು ಯಶಸ್ವಿಯಾಗಿ ಆಚರಿಸಲು ಸಾಧ್ಯವಾಯಿತು ಎಂದರು.
ಸಭೆಯಲ್ಲಿ ಕ.ಸಾ.ಪ. ಜಿಲ್ಲಾಧ್ಯಕ್ಷ ಲೋಕೇಶ್‍ಸಾಗರ್, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪ್ರಮುಖರಾದ ಹರಪಳ್ಳಿ ರವೀಂದ್ರ, ಗಿರೀಶ್ ಮಲ್ಲಪ್ಪ, ಕೆ.ಎಂ. ಲೋಕೇಶ್, ಕೆ.ಎಸ್. ರಾಮಚಂದ್ರ, ರಘುಕುಮಾರ್, ಪರಿಷತ್‍ನ ಪದಾಧಿಕಾರಿಗಳಾದ ಎ.ಪಿ. ವೀರರಾಜು, ಕೆ.ಎ. ಆದಂ, ಜಲಕಾಳಪ್ಪ ಮತ್ತಿತರರು ಉಪಸ್ಥಿತರಿದ್ದರು.
 
						