ಸೋಮವಾರಪೇಟೆ, ಜೂ. 25: ಕಳೆದ ಹತ್ತು ವರ್ಷಗಳ ಹಿಂದೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ತಲೆಮರೆಸಿ ಕೊಂಡಿದ್ದ ಆರೋಪಿಯನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.ಕಳೆದ 10 ವರ್ಷಗಳ ಹಿಂದೆ ಮುಕ್ಕೋಡ್ಲು ಗ್ರಾಮದ ಕುಶಾಲಪ್ಪ ಎಂಬವರ ಮೇಲೆ ಹಲ್ಲೆ ನಡೆಸಿದ್ದ ಅಂಜನಗೇರಿ ಬೆಟ್ಟಗೇರಿ ನಿವಾಸಿ ಮುತ್ತಪ್ಪ ಎಂಬಾತನನ್ನು ಪೊಲೀಸರು ಗೋಣಿಕೊಪ್ಪದಲ್ಲಿ ವಶಕ್ಕೆ ಪಡೆದಿದ್ದಾರೆ.ಕಳೆದ 6.07.2009ರಂದು ಕುಶಾಲಪ್ಪ ಅವರು ಹಟ್ಟಿಹೊಳೆಯ ರಂಗಪ್ಪ ಅವರ ಅಂಗಡಿಗೆ ತೆರಳಿದ ಸಂದರ್ಭ ಆರೋಪಿ ಮುತ್ತಪ್ಪ ವಿನಾಕಾರಣ ಜಗಳ ತೆಗೆದುಕತ್ತಿಯಿಂದ ಕೈಗೆ ಕಡಿದಿದ್ದ. ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ.ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಗೋಣಿಕೊಪ್ಪದಲ್ಲಿ ಕಾಫಿ ತೋಟದ ಲೈನ್‍ಮನೆಯಲ್ಲಿ ವಾಸವಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಸಿಬ್ಬಂದಿಗಳಾದ ಕುಮಾರ್, ಪರಮೇಶ್ ಅವರುಗಳು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಜುಲೈ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.