ಸೋಮವಾರಪೇಟೆ, ಜೂ. 25: ಇತ್ತೀಚೆಗೆ ನಿಧನರಾದ ಇಲ್ಲಿನ ಸೋಮವಾರಪೇಟೆ ವಿವಿಧೋದ್ಧೇಶ ಸಹಕಾರ ಸಂಘದ ಸಿಬ್ಬಂದಿ ಎಂ.ಕೆ. ಅಶೋಕ್ ಅವರ ಕುಟುಂಬಕ್ಕೆ ಸಂಘದ ವತಿಯಿಂದ ರೂ. 25 ಸಾವಿರ ಆರ್ಥಿಕ ನೆರವು ನೀಡಲಾಯಿತು.
ಸಂಘದ ಅಧ್ಯಕ್ಷ ಬಿ.ಪಿ. ಶಿವಕುಮಾರ್ ಮಾತನಾಡಿ, ಸಂಘದಲ್ಲಿ ಪಿಗ್ಮಿ ಸಂಗ್ರಹಗಾರನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದ ಅಶೋಕ್ ಅವರ ತಾಯಿ ತೀವ್ರ ಆರ್ಥಿಕ ತೊಂದರೆಯಲ್ಲಿದ್ದುದರಿಂದ ಸಂಘದ ವತಿಯಿಂದ ರೂ. 25 ಸಾವಿರ ನೆರವು ನೀಡಲಾಗಿದೆ ಎಂದರು.
ಸಂಘದಿಂದ ಬರಬೇಕಾಗಿದ್ದ ಎಲ್ಲಾ ವಿಮೆ, ಗ್ರಾಚ್ಯುಯಿಟಿ, ಭದ್ರತಾ ಠೇವಣಿ ಸೇರಿದಂತೆ ರೂ.2 ಲಕ್ಷದ 75 ಸಾವಿರ ಹಣವನ್ನು ಅಶೋಕ್ ಅವರ ಆಸ್ಪತ್ರೆ ಚಿಕಿತ್ಸೆಗೆ ಸಂದಾಯವಾಗಿ ದ್ದರಿಂದ ಅವರ ತಾಯಿಯವರ ಮನವಿ ಮೇರೆಗೆ ಆಡಳಿತ ಮಂಡಳಿ ನೆರವು ನೀಡಲು ತೀರ್ಮಾನಿಸಿತು ಎಂದು ಹೇಳಿದರು. ಈ ಸಂದರ್ಭ ಸಂಘದ ನಿರ್ದೇಶಕರುಗಳಾದ ಬಿ.ಡಿ. ಮಂಜುನಾಥ್ ಮತ್ತು ಮೃತ್ಯುಂಜಯ ಉಪಸ್ಥಿತರಿದ್ದರು.