ಗೋಣಿಕೊಪ್ಪ ವರದಿ, ಜೂ. 25 : ಇಲ್ಲಿನ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ರೋಟರಿ ಕ್ಲಬ್ ನೂತನ ಸಮಿತಿ ಸದಸ್ಯರುಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಪದಗ್ರಹಣ ಅಧಿಕಾರಿ ರೋಟರಿ ನಿಕಟಪೂರ್ವ ಗವರ್ನರ್ ಎಂ. ಎ. ಸುರೇಶ್ ಚಂಗಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರು. ಗೋಣಿಕೊಪ್ಪಲು ರೋಟರಿ ಕ್ಲಬ್ ಅಧ್ಯಕ್ಷರಾಗಿ ಕಾಡ್ಯಮಾಡ ನೆವೀನ್, ಕಾರ್ಯದರ್ಶಿ ತಾಣಚ್ಚೀರ ಬಿ. ಪೂಣಚ್ಚ, ಉಪಾಧ್ಯಕ್ಷ ಶುಭಾಶಿಣಿ ಕುಮಾರ್, ಜಂಟಿ ಕಾರ್ಯದರ್ಶಿ ಚೇಂದಂಡ ಸುಮಿ ಸುಬ್ಬಯ್ಯ, ಖಜಾಂಜಿ ಸಜನ್ ಚೆಂಗಪ್ಪ ಅಧಿಕಾರ ವಹಿಸಿಕೊಂಡರು.

ಉಳಿದಂತೆ ಸಾರ್ಜೆಂಟ್ ಪ್ರಮೋದ್ ಕಾಮತ್, ಕ್ಲಬ್ ಸೇವಾ ನಿರ್ದೇಶಕ ಡಾ. ಚಂದ್ರಶೇಖರ್, ವೃತ್ತಿಪರ ಸೇವಾ ನಿರ್ದೇಶಕ ಬಿ. ಎ. ದೇಚಮ್ಮ, ಅಂತಾರ್ರಾಷ್ಟ್ರೀಯ ಸೇವಾ ಯೋಜನೆ ನಿರ್ದೇಶಕ ಡಾ. ಸಿ. ಜಿ. ಕುಶಾಲಪ್ಪ, ಯುವ ಸೇವಾ ನಿರ್ದೇಶಕ ಡಾ. ಆಶಿಕ್ ಚೆಂಗಪ್ಪ, ಪಲ್ಸ್ ಪೋಲಿಯೋ ಯೋಜನೆ ಮುಖ್ಯಸ್ಥ ಟಿ. ಯು. ಮೋಹನ್, ಟಿಆರ್‍ಎಫ್ ಮುಖ್ಯಸ್ಥ ಇಮ್ಮಿ ಉತ್ತಪ್ಪ, ಜಿಲ್ಲಾ ಯೋಜನಾ ಮುಖ್ಯಸ್ಥ ಪಿ. ಬಿ. ಪೂಣಚ್ಚ, ತರಬೇತಿ ಮುಖ್ಯಸ್ಥ ಎಂ. ಕೆ. ದೀನಾ, ವಿನ್ಸ್ ಮುಖ್ಯಸ್ಥ ಡಾ. ಕೆ. ಪಿ. ಚಿಣ್ಣಪ್ಪ, ಸದಸ್ಯತ್ವ ಅಭಿವೃದ್ಧಿ ಸಮಿತಿ ಮುಖ್ಯಸ್ಥ ವಾಸು ಉತ್ತಪ್ಪ, ವೆಬ್ಸ್ ಮುಖ್ಯಸ್ಥ ಬೀಟಾ ಲಕ್ಷ್ಮಣ್, ಆರ್ಥಿಕ ಕ್ರೋಡೀಕರಣ ಸಮಿತಿ ಮುಖ್ಯಸ್ಥ ಎಂ. ಜಿ. ಮೋಹನ್, ಬುಲೆಟಿನ್ ಮುಖ್ಯಸ್ಥ ಸುಷ್ಮಾ ಚೆಂಗಪ್ಪ, ಆನ್ಸ್ ಕ್ಲಬ್ ಅಧ್ಯಕ್ಷೆಯಾಗಿ ಮಮತಾ ಹೆಗ್ಡೆ, ಕಾರ್ಯದರ್ಶಿಯಾಗಿ ಕಾಡ್ಯಮಾಡ ಪವಿತ್ರಾ ನೆವೀನ್ ಅವರುಗಳು ಪದಗ್ರಹಣ ಸ್ವೀಕರಿಸಿದರು.

ರೋಟರಿ ನಿಕಟಪೂರ್ವ ಗವರ್ನರ್ ಎಂ. ಎ. ಸುರೇಶ್ ಚೆಂಗಪ್ಪ ಮಾತನಾಡಿ, ರೋಟರಿ ಸಹ ಯೋಗದ ಪಲ್ಸ್ ಪೋಲಿಯೋ ಲಸಿಕೆ ಆಂದೋಲನ ಯಶಸ್ವಿಯಾಗಿದ್ದು ಕೆಲವೇ ತಿಂಗಳಲ್ಲಿ ಜಗತ್ತು ಪೋಲಿಯೋ ಮುಕ್ತವಾಗಲಿದೆ. ರೋಟರಿ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ 50 ಮಿಲಿಯನ್ ಡಾಲರ್ ಆರ್ಥಿಕ ಸಹಯೋಗದೊಂದಿಗೆ ಪೆÇಲಿಯೋ ನಿರ್ಮೂಲನೆಗೆ ಪಣತೊಟ್ಟಿದೆ ಎಂದು ಅವರು ತಿಳಿಸಿದರು.

ಸಹಾಯಕ ರಾಜ್ಯಪಾಲ ಪಿ.ನಾಗೇಶ್ ಮಾತನಾಡಿ, ಸೇವಾ ಮನೋಭಾವದೊಂದಿಗೆ ಸಮಾಜಕ್ಕೆ ಒಳಿತುಂಟು ಮಾಡುವ ಜಾಗತಿಕ ಸೇವಾ ಸಂಸ್ಥೆಯಾದ ರೋಟರಿ ಪ್ರತಿ ವರ್ಷ ಹೆಚ್ಚುಹೆಚ್ಚು ಸದಸ್ಯರ ಸೇರ್ಪಡೆಯೊಂದಿಗೆ ಸದೃಡ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದರು.

ರೋಟರಿ ವಲಯ ಕಾರ್ಯ ದರ್ಶಿ ಅನಿಲ್ ಎಚ್.ಟಿ. ಮಾತನಾಡಿ, ಸಂಸ್ಥೆಗಳಲ್ಲಿ ಮಹಿಳೆ ಯರೂ ಸಕ್ರಿಯರಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವದು ಪ್ರಶಂಸನೀಯ ಎಂದರು. ವಲಯ ಲೆಫ್ಟಿನೆಂಟ್ ಡಾ. ನರಸಿಂಹನ್ ಮಾತನಾಡಿ, ಅಧ್ಯಕ್ಷ ಮತ್ತು ಕಾರ್ಯದರ್ಶಿ ತಮ್ಮ ತಂಡವನ್ನು ಕುಟುಂಬದಂತೆ ಕಾಳಜಿಯಿಂದ ನೋಡಿಕೊಂಡು ಸಮಾಜಸೇವೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.

ನಿರ್ಗಮಿತ ಅಧ್ಯಕ್ಷ ದಿಲನ್ ಚಂಗಪ್ಪ ಮಾತನಾಡಿ, ಜನರ ಸ್ಪಂದನೆಯೂ ಸಾಕಷ್ಟು ಕಾರ್ಯ ಚಟುವಟಿಕೆಗಳಿಗೆ ಸ್ಪೂರ್ತಿಯಾಯಿತು ಎಂದರು. ನಿರ್ಗಮಿತ ಕಾರ್ಯದರ್ಶಿ ಬೀಟಾ ಲಕ್ಷ್ಮಣ್ ಸಂಸ್ಥೆಯ ವರದಿ ವಾಚಿಸಿದರು. ವಲಯದ 2018-19ನೇ ಸಾಲಿನ ಸಹಾಯಕ ಗವರ್ನರ್ ಧರ್ಮಪುರ ನಾರಾಯಣ್, ವಲಯ ಕಾರ್ಯದರ್ಶಿ ಕ್ರೆಜ್ವಲ್ ಕೋಟ್ಸ್ ಜೋನಲ್ ಲೆಫ್ಟಿನೆಂಟ್ ರೀಟಾ ದೇಚಮ್ಮ ವೇದಿಕೆಯಲ್ಲಿದ್ದರು.

ಗೋಣಿಕೊಪ್ಪಲು ರೋಟರಿ ಕ್ಲಬ್‍ಗೆ ಲತಾ ಬೋಪಣ್ಣ ಮತ್ತು ಕೆ. ಅರುಣ್ ತಮ್ಮಯ್ಯ ಅವರನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸ ಲಾಯಿತು. ರೋಟರಿ ವಲಯದ ವಿವಿಧ ಕ್ಲಬ್‍ಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರೋಟರಿ ಸೇವಾ ನಿರ್ದೇಶಕ ಡಾ. ಕೆ. ಎನ್. ಚಂದ್ರಶೇಖರ್, ಯೋಜನಾ ಘಟಕ ನಿರ್ದೇಶಕ ಪಿ. ಬಿ. ಪೂಣಚ್ಚ, ಜಂಟಿ ಕಾರ್ಯದರ್ಶಿ ಸುಮಿ ಸುಬ್ಬಯ್ಯ, ವಲಯ ಸೇನಾನಿಗಳಾದ ಬಿ. ಎ. ದೇಚಮ್ಮ ಉಪಸ್ಥಿತರಿದ್ದರು.

-ಸುದ್ದಿಪುತ್ರ