ಮಡಿಕೇರಿ, ಜೂ. 25: ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲೀನಿಕ್ ತಾ. 29 ರಂದು ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಆದರೆ ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ.

ಇ.ಸಿ.ಹೆಚ್.ಎಸ್.ನಲ್ಲಿ ಈವಾಗ 2ನೇ ವಿಶ್ವ ಯುದ್ಧದಲ್ಲಿ ಭಾಗಿಯಾಗಿರುವ ಸೈನಿಕರಿಗೆ, ಶಾರ್ಟ್ ಸರ್ವೀಸ್ ನಿಯೋಜಿತ ಅಧಿಕಾರಿಗಳಿಗೆ, ತುರ್ತು ನಿಯೋಜಿತ ಅಧಿಕಾರಿಗಳಿಗೆ, ಪೂರ್ವ ಪ್ರಬುದ್ಧ ನಿವೃತ್ತಿ ಹೊಂದಿದ ಸೈನಿಕರಿಗೆ ಮತ್ತು ಅವರ ಪತ್ನಿಯರಿಗೆ ಇ.ಸಿ.ಹೆಚ್.ಎಸ್. ಸೇವೆ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಇ.ಸಿ.ಹೆಚ್.ಎಸ್. ಮಡಿಕೇರಿಯ ಅಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ.