ಮಡಿಕೇರಿ, ಜೂ.24 :ರೋಟರಿ ಜಿಲ್ಲೆ 3181 ನ ವಲಯ 6 ರ ಸಹಾಯಕ ರಾಜ್ಯಪಾಲರಾಗಿ ಸೋಮವಾರಪೇಟೆ ರೋಟರಿ ಹಿಲ್ಸ್ ನ ಪಿ.ನಾಗೇಶ್ ನೇಮಕಗೊಂಡಿದ್ದಾರೆ.
ರೋಟರಿ ವಲಯದಲ್ಲಿನ 14 ರೋಟರಿ ಕ್ಲಬ್ಗಳಿಗೆ ಅಸಿಸ್ಟೆಂಟ್ ಗವರ್ನರ್ ಆಗಿ 2019-20 ನೇ ಸಾಲಿನಲ್ಲಿ ಕಾರ್ಯನಿರ್ವಹಿಸಲಿರುವ ನಾಗೇಶ್ ಕಳೆದ ಸಾಲಿನಲ್ಲಿ ಸೋಮವಾರಪೇಟೆ ರೋಟರಿ ಹಿಲ್ಸ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ರೋಟರಿ ಜಿಲ್ಲೆ 3181 ನ 2019-20 ನೇ ಸಾಲಿನ ಗವರ್ನರ್ ಜೋಸೆಫ್ ಮ್ಯಾಥ್ಯು ನಾಗೇಶ್ ಅವರನ್ನು ವಲಯ 6 ರ ಸಹಾಯಕ ಗವರ್ನರ್ ಆಗಿ ನೇಮಕ ಮಾಡಿದ್ದಾರೆ.
ಸೋಮವಾರಪೇಟೆಯಲ್ಲಿ ಎಲ್ ಐ.ಸಿಯ ಅಭಿವೃದ್ಧಿ ಅಧಿಕಾರಿಯಾಗಿ 1989 ರಿಂದ ಕಾರ್ಯನಿರ್ವಹಿಸುತ್ತಿರುವ ಪಿ.ನಾಗೇಶ್ ರೋಟರಿ ಸೇವಾ ಸಂಸ್ಥೆಯಲ್ಲಿ 15 ವರ್ಷಗಳಿಂದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಸೋಮವಾರಪೇಟೆ ರೋಟರಿ ಹಿಲ್ಸ್ನ ಅಧ್ಯಕ್ಷರಾಗಿ 2009-10 ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿದ್ದ ನಾಗೇಶ್ ಎರಡು ಬಾರಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಶನಿವಾರಸಂತೆ ಮತ್ತು ಕೊಡ್ಲಿಪೇಟೆಗಳಲ್ಲಿ ನೂತನ ರೋಟರಿ ಕ್ಲಬ್ ಪ್ರಾರಂಭದಲ್ಲಿಯೂ ನಾಗೇಶ್ ಪ್ರಮುಖ ಪಾತ್ರ ವಹಿಸಿದ್ದರು.