ಕುಶಾಲನಗರ, ಜೂ. 23: ಕುಶಾಲನಗರ ಪಟ್ಟಣದ ಐತಿಹಾಸಿಕ ಹಿನ್ನಲೆಯ ಗಣಪತಿ ದೇವಾಲಯದ ಧ್ವಜಸ್ತಂಭ ಬದಲಾವಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸುಮಾರು 1 ಶತಮಾನದ ಹಿಂದಿನ ಧ್ವಜಸ್ತಂಭವನ್ನು ಬದಲಾಯಿಸಲಾಗುತ್ತಿದ್ದು ತಾ. 27 ರಂದು ನೂತನ ಸ್ತಂಭ ಅಳವಡಿಸಲು ಪೂಜಾ ವಿಧಿವಿಧಾನಗಳು ನಡೆದಿವೆ.

ಹಳೆಯ ಧ್ವಜಸ್ತಂಭ ಅಲ್ಪ ಭಿನ್ನವಾಗಿದ್ದು ತಂತ್ರಿಗಳ ಮಾರ್ಗದರ್ಶನದ ಹಿನ್ನೆಲೆಯಲ್ಲಿ ಈ ಬದಲಾವಣೆ ಕಾರ್ಯ ನಡೆದಿದೆ ಎಂದು ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷರಾದ ವಿ.ಎನ್.ವಸಂತಕುಮಾರ್ ತಿಳಿಸಿದ್ದಾರೆ,

ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಹೋಮ, ಹವನ ಪೂಜಾ ಕಾರ್ಯ ನಡೆದಿದ್ದು ತಾ. 27 ರಂದು ನೂತನ ಧ್ವಜಸ್ತಂಭ ಅಳವಡಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ.