ಸಿದ್ದಾಪುರ, ಜೂ. 23 : ವಿದ್ಯಾರ್ಥಿಗಳು ಮೊಬೈಲ್ ಹಾಗೂ ದುಶ್ಚಟದಿಂದ ದೂರ ಉಳಿದು, ಓದಿನ ಕಡೆ ಗಮನ ಹರಿಸಿ ಪೋಷಕರಿಗೆ ಹೆಸರು ತಂದುಕೊಡಬೇಕೆಂದು ಇಕ್ರಾ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಕೆ.ಯು ಅಬ್ದುಲ್ ಮಜೀದ್ ಕರೆ ನೀಡಿದರು.
ಕಳೆದ ಆರು ವರ್ಷಗಳಿಂದ ಶಾಲೆಗೆ ಹತ್ತನೇ ತರಗತಿಯಲ್ಲಿ ಶೇ 100 ರಷ್ಟು ಪಲಿತಾಂಶ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ನಡೆದ ಅಭಿನಂದನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಖ್ಯ ಶಿಕ್ಷಕ ಕೆ.ಯು ಅಬ್ದುಲ್ ರಜಾಕ್
ಮಾತನಾಡಿ, ಶಿಕ್ಷಕರುಗಳ ಪರಿಶ್ರಮದಿಂದ 30 ವಿದ್ಯಾರ್ಥಿಗಳು ಈ ಬಾರಿ ನಡೆದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಅತ್ಯುನ್ನತ ಹಾಗೂ ಉನ್ನತ ಶ್ರೇಣಿಯಲ್ಲಿ ಶಾಲೆಗೆ ಶೇ. 100 ಫಲಿತಾಂಶ ತಂದುಕೊಟ್ಟಿದ್ದಾಗಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ಸಿ.ಕೆ ಬಶೀರ್ ಹಾಜಿ, ಪ್ರಮುಖರಾದ ಕೆ.ಉಸ್ಮಾನ್ ಹಾಜಿ, ಉಮ್ಮರ್ ಹಾಜಿ, ಸಮೀರ್, ಪೋಕರ್ ಶಫೀಕ್ ಇಸ್ಮಾಯಿಲ್ ಸೇರಿದಂತೆ ಇನ್ನಿತರರು ಇದ್ದರು.