ಮಡಿಕೇರಿ: ‘ಯೋಗವು ಜೀವನದ ಅವಿಬಾಜ್ಯ ಅಂಗ. ಪ್ರತಿಯೊಬ್ಬರು ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯ ಪಡೆಯಬೇಕು’ ಎಂದು ಯೋಗಪಟು ಅಶೋಕ್ ಅಯ್ಯಪ್ಪ ಅವರು ಇಂದಿಲ್ಲಿ ಹೇಳಿದರು.
ಕೇಂದ್ರಿಯ ಕ್ರೀಡಾ ಫ್ರಾಧಿಕಾರ ಹಾಗೂ ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಇಲ್ಲಿನ (ಸಾಯಿ) ಸಭಾಂಗಣದಲ್ಲಿ ಯೋಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ಶಿಕ್ಷಕ ಎಸ್.ಟಿ. ವೆಂಕಟೇಶ ಯೋಗದ ಅರ್ಥ, ಪ್ರಾಮುಖ್ಯತೆ. ಹಾಗೂ ಲಾಭಗಳನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ವಾಂಡರರ್ಸ್ ಸ್ಪೋಟ್ಸ್ ಕ್ಲಬ್ನ ಕ್ರೀಡಾ ಸಂಯೋಜಕರಾದ ಬಾಬು ಸೋಮಯ್ಯ, ಕೋಟೇರ ಎನ್. ಮುದ್ದಯ್ಯ, ಶ್ಯಾಮ್ ಪೂಣ್ಣಚ್ಚ ಹಾಗೂ ಕೇಂದ್ರಿಯ ಕ್ರೀಡಾ ಪ್ರಾಧಿಕಾರದ ಅಥ್ಲೆಟಿಕ್ ಕೋಚ್ ಉಮೇಶ್ ಉಪಸ್ಥಿತರಿದ್ದರು.
ಯೋಗ ಶಿಕ್ಷಕರಾದ ಎಸ್.ಟಿ. ವೆಂಕಟೇಶ್ ವಿದ್ಯಾರ್ಥಿಗಳಿಂದ ಯೋಗ ಪ್ರಾಣಾಯಾಮ ಧ್ಯಾನ ಪ್ರಾಯೋಗಿಕ ತರಬೇತಿ ನೀಡಿದರು.
ವೀರಾಜಪೇಟೆ: ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರ್ವೋದಯ ಶಿಕ್ಷಣ ಮಹಾವಿದ್ಯಾನಿಲಯ, ವೀರಾಜಪೇಟೆಯಲ್ಲಿ ನಡೆಸಲಾಯಿತು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕಳಂಚೇರಿ ಮಠ, ವೀರಾಜಪೇಟೆ ಇವರು ವಿಧ್ಯುಕ್ತ ಚಾಲನೆ ನೀಡಿದರು.
ಬಿ.ಸಿ. ಪ್ರೌಢಶಾಲೆ, ದೇವಣಗೇರಿಯ ಕಾರ್ಯನಿರ್ವಹಣಾಧಿಕಾರಿ ಬೊಳ್ಳಮ್ಮ ಯೋಗದಿಂದ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದೆಂದು ತಿಳಿಸಿದರು.
ಪ್ರಶಿಕ್ಷಾಣಾರ್ಥಿಗಳು ಒಂದು ಗಂಟೆಯ ಕಾಲ ಯೋಗ ಗುರು ಲಕ್ಷ್ಮೀನಾರಾಯಣ ಅವರಿಂದ ಯೋಗ ಪ್ರಾತ್ಯಕ್ಷಿಕೆ ಆಕರ್ಷಣೆಯಾಗಿತ್ತು. ಸಂಸ್ಥೆಯ ಅಧ್ಯಕ್ಷೆ ಸೂರ್ಯಕುಮಾರಿ, ಖಚಾಂಜಿ ವಾಸಂತಿ, ಪ್ರಾಂಶುಪಾಲೆ ವಾಣಿ, ಯೋಗ ಸಂಯೋಜಕಿ ಪದ್ಮಲತಾ ಹಾಗೂ ಬೋಧಕ, ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಮರಗೋಡು: ಇಲ್ಲಿನ ಭಾರತಿ ಹೈಸ್ಕೂಲ್ ಸೊಸೈಟಿ,ಗ್ರಾಮ ಪಂಚಾಯತ್ ಹೊಸ್ಕೇರಿ, ವೈಷ್ಣವಿ ಫುಟ್ ಬಾಲ್ ಕ್ಲಬ್ ಮತ್ತು ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಭಾರತಿ ವಿದ್ಯಾಸಂಸ್ಥೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಭಾರತಿ ಹೈಸ್ಕೂಲ್ ಸೊಸೈಟಿಯ ಅಧ್ಯಕ್ಷ ಕಟ್ಟೆಮನೆ ಸೋನಾಜಿತ್ ಉದ್ಘಾಟಿಸಿದರು.
ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಆನಂದ ರಘು, ದೈಹಿಕ ಶಿಕ್ಷಣ ಶಿಕ್ಷಕ ಕೆ. ಶಿವಪ್ರಸಾದ್ ಮಾತನಾಡಿದರು. ಎನ್.ಸಿ.ಸಿ. ಕೆಡೆಟ್ಗಳು ಕೆ.ಎಸ್. ಕೃಷ್ಣ ನೇತೃತ್ವದಲ್ಲಿ ಯೋಗ ಪ್ರದರ್ಶಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಿಂದ ಸಾಮೂಹಿಕ ಯೋಗಾಭ್ಯಾಸ ಜರುಗಿತು.
ಕಾರ್ಯಕ್ರಮದಲ್ಲಿ ವೈಷ್ಣವಿ ಫುಟ್ಬಾಲ್ ಕ್ಲಬ್ನ ಅಧ್ಯಕ್ಷ ಪಾಣತ್ತಲೆ ಜಗದೀಶ್, ಭಾರತಿ ಹೈಸ್ಕೂಲ್ ನಿರ್ದೇಶಕ ಕೋಚನ ಅನೂಪ್, ಪಾರೇರ ಯತೀಶ್, ಹಿರಿಯ ಉಪನ್ಯಾಸಕ ಪಿ.ಟಿ. ಶಾಜಿ, ಮುಖ್ಯಶಿಕ್ಷಕ ಪಿ.ಎಸ್. ರವಿಕೃಷ್ಣ, ಯೋಗಪಟು ಕಟ್ಟೆಮನೆ ಮೀನಾಕ್ಷಿ, ಹೊಸ್ಕೇರಿ ಪಂಚಾಯಿತಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಬಿ.ಬಿ. ಪೂರ್ಣಿಮ ನಿರೂಪಿಸಿ, ಎಂ.ಪಿ. ವೀಣಾ ವಂದಿಸಿದರು.ಈಶ ಫೌಂಡೇಶನ್: ಐದನೇ ಅಂತರರಾಷ್ಟ್ರೀಯ ಯೋಗ ದಿನದಂದು, ಈಶ ಫೌಂಡೇಶನ್ನ ಸಂಸ್ಥಾಪಕ ಸದ್ಗುರು ವಾಸುದೇವ್ ಅವರು ಪೋರ್ಟ್ ಬ್ಲೇರ್ನಲ್ಲಿರುವ ಭಾರತೀಯ ಜಲ ಸೇನಾಪಡೆಯ ತೇಲುವ ಹಡಗುಕಟ್ಟೆಯಲ್ಲಿ ಯೋಗ ಶಿಬಿರವನ್ನು ನಡೆಸಿಕೊಟ್ಟರು. ಅಂಡಮಾನ್ ಮತ್ತು ನಿಕೋಬಾರ್ ವಿಭಾಗದ ಕಮಾಂಡರ್-ಇನ್-ಚೀಫ್, ವೈಸ್ ಆಡ್ಮಿರಲ್ ಬಿಮಲ್ ವರ್ಮಾ ಸದ್ಗುರುಗಳನ್ನು ತೇಲುವ ಹಡಗುಕಟ್ಟೆಗೆ ಸ್ವಾಗತಿಸಿ, ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜಾಯಿಂಟ್ ಸರ್ವಿಸಸ್ನ ಸುಮಾರು 500 ಆಫೀಸರ್ಗಳು ತಮ್ಮ ಕುಟುಂಬಗಳೊಂದಿಗೆ ಇದರಲ್ಲಿ ಭಾಗವಹಿಸಿದ್ದರು.
ಈಶ ಫೌಂಡೇಶನ್ ತನ್ನ ತರಬೇತಿ ಹೊಂದಿದ ಹಠಯೋಗ ಶಿಕ್ಷಕರ ಮೂಲಕ, ಭೂಪಡೆ, ಜಲಪಡೆ, ವಾಯುಪಡೆ ಮತ್ತು ಕೋಸ್ಟ್ ಗಾರ್ಡ್ಗಳಿಗೆ ತಾ. 20 ರಂದು ಮಿನ್ನಿ ಬೇ, ಹಡ್ಡೊ ಮತ್ತು ಬ್ರಿಚ್ ಗುಂಜ್ಗಳಲ್ಲೂ ಯೋಗ ಶಿಬಿರಗಳನ್ನು ನಡೆಸಿಕೊಟ್ಟಿತು. 500 ಕ್ಕೂ ಹೆಚ್ಚು ಯೋಧರು ಮತ್ತವರ ಕುಟುಂಬಗಳು ಈಶ ಉಪ-ಯೋಗವನ್ನು ಕಲಿತರು. ಉಪ-ಯೋಗವು ಒಂದು ಸರಳ ಆದರೆ ಶಕ್ತಿಯುತ ಅಭ್ಯಾಸ. ಅದು ಜೀವವ್ಯವಸ್ಥೆಯಲ್ಲಿ ಆರೋಗ್ಯ ಮತ್ತು ಸಮತೋಲನವನ್ನು ಕಾಪಾಡುತ್ತದೆ ಎಂದರು.
ಸದ್ಗುರು ಮಾತನಾಡಿ, ಅಂಡಮಾನ್ ಮತ್ತು ನಿಕೋಬಾರ್ಗಳಲ್ಲಿ ತಮ್ಮ ಕುಟುಂಬ ಮತ್ತು ಭಾರತದ ಮುಖ್ಯ ಭೂಪ್ರದೇಶದಿಂದ ಎಷ್ಟೋ ದೂರದಲ್ಲಿರುವ ನಮ್ಮ ಸೈನಿಕರು, ರಾಷ್ಟ್ರವನ್ನು ರಕ್ಷಿಸಲು ತಮ್ಮ ಜೀವವನ್ನೇ ಪಣವಾಗಿಡುತ್ತಿದ್ದಾರೆ ಎಂದು ಶ್ಲಾಘಿಸಿದರು.ದೇವಣಗೇರಿ: ಬಿ.ಸಿ. ಪ್ರೌಢಶಾಲೆ, ದೇವಣಗೇರಿಯಲ್ಲಿ 5ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹೃದಯಕ್ಕಾಗಿ ಯೋಗ ಎಂಬ ಶೀರ್ಷಿಕೆಯಲ್ಲಿ ಪಿ.ಎ. ಲಕ್ಷ್ಮೀ ನಾರಾಯಣ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟಿರ ಸುನಿಲ್ ನಾಣಯ್ಯ ವಹಿಸಿದ್ದರು. ಸರ್ವೋದಯದ ಪ್ರಾಂಶುಪಾಲೆ ವಾಣಿ ಪುಷ್ಪರಾಜು, ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಚೇಂದಂಡ ಜಿ. ಪೊನ್ನಪ್ಪ, ಸದಸ್ಯರುಗಳಾದ ಬೀನಂಡ ಎಸ್. ಪೂಣಚ್ಚ, ಚಾರಿಮಂಡ ಎಂ. ಮುತ್ತಪ್ಪ, ರಾಜಶೇಖರ್ ಹಾಗೂ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಶಾಲಾ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್ ಸ್ವಾಗತಿಸಿ, ಶಿಕ್ಷಕಿ ವೈ. ಪ್ರಮೀಳ ಕುಮಾರಿ ನಿರೂಪಿಸಿ, ಶಿಕ್ಷಕಿ ಎ.ಸಿ. ಸುನಿತ ವಂದಿಸಿದರು.
ಸುಂಟಿಕೊಪ್ಪ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಯೋಗಭ್ಯಾಸ ನಡೆಯಿತು.
ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಶಾಲೆಯ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ಯೋಗ ಅಭ್ಯಾಸಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಆರೋಗ್ಯವಂತರಾಗಿ ಇರಬೇಕೆಂದರೆ ಯೋಗ ಅತೀ ಮುಖ್ಯ ಎಂದರು.
ಶಾಲಾ ಆಡಳಿತ ಮಂಡಳಿ ಸದಸ್ಯ ಲಕ್ಷ್ಮೀ ನಾರಾಯಣ (ಲವ) ಯೋಗದಿಂದ ದೇಹವು ನಿತ್ಯವು ಲವಲವಿಕೆ ಪರಿಪೂರ್ಣತೆಯಿಂದ ಕೂಡಿರುತ್ತದೆ. ಎಲ್ಲರೂ ಯೋಗವನ್ನು ಪ್ರತಿನಿತ್ಯ ಮಾಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಕೆ.ಎಸ್. ಇಂದಿರಾ, ಸಹ ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಇದ್ದರು.
ಶಿರಂಗಾಲ: ಸರ್ಕಾರಿ ಪದವಿಪೂರ್ವ ಕಾಲೇಜು ಶಿರಂಗಾಲದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಪ್ರೌಢಶಾಲಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಯೋಗ ದಿನವನ್ನು ಆಚರಿಸಲಾಯಿತು.
ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಉದ್ಘಾಟಿಸಿದರು. ಉಪನ್ಯಾಸಕ ವೆಂಕಟೇಶ್, ಹೇಮಲತಾ, ಶಿವಕುಮಾರ್, ಶಿಕ್ಷಕರಾದ ರಮ್ಯ, ಲೋಕೇಶ್, ಲಿಯೋನಾ ಇದ್ದರು ದೈಹಿಕ ಶಿಕ್ಷಕಿ ಸೌಮ್ಯ ವಿದ್ಯಾರ್ಥಿಗಳಿಗೆ ಯೋಗಗಳನ್ನು ತಿಳಿಸಿಕೊಟ್ಟರು.
ಸಿದ್ದಾಪುರ: ಸಿದ್ದಾಪುರದ ಬಿ.ಜಿ.ಎಸ್. ಪಬ್ಲಿಕ್ ಶಾಲೆಯಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ವಿದ್ಯಾರ್ಥಿಗಳು ಯೋಗ ಪ್ರದರ್ಶಿಸಿದರು. ಶಾಲೆಯ ಮುಖ್ಯ ಶಿಕ್ಷಕ ಮತ್ತು ಶಿಕ್ಷಕ ವೃಂದದವರು ಹಾಜರಿದ್ದರು.ಸೋಮವಾರಪೇಟೆ: ಸೋಮವಾರಪೇಟೆಯ ವಿವಿಧೆಡೆಗಳಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಬೀಟಿಕಟ್ಟೆ-ಹಾರಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಮಕ್ಕಳು ಯೋಗಭ್ಯಾಸ ಮಾಡಿದರು. ಸಂಘದ ಅಧ್ಯಕ್ಷ ಕುಮಾರ್ ಮತ್ತಿತರರು ಇದ್ದರು.
ಕುವೆಂಪು ವಿದ್ಯಾಸಂಸ್ಥೆ: ಸೋಮವಾರಪೇಟೆ ಒಕ್ಕಲಿಗರ ಸಂಘದ ಕುವೆಂಪು ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಮಕ್ಕಳು ಸಾಮೂಹಿಕ ಯೋಗ ಮಾಡಿದರು. ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಶಾಲೆಯ ಮುಖ್ಯ ಶಿಕ್ಷಕಿ ಮಿಲ್ಗ್ರೆಡ್ ಗೋನ್ಸಾಲ್ವೆಸ್ ಇದ್ದರು.
ಗೋಣಿಕೊಪ್ಪ ವರದಿ: ಯೋಗ ದಿನಾಚರಣೆ ಪ್ರಯುಕ್ತ ಪಾಲಿಬೆಟ್ಟ ಚೆಷೈರ್ ಹೋಂ ವಿಶೇಷ ಮಕ್ಕಳ ಶಾಲೆಗೆ ಯೋಗ ಮ್ಯಾಟ್ ಸೇರಿದಂತೆ ಹಲವು ಸಾಮಗ್ರಿಗಳನ್ನು ಜೆಸಿಐ ಪೊನ್ನಂಪೇಟೆ ಗೋಲ್ಡನ್ ಹಾಗೂ ಗೋಣಿಕೊಪ್ಪ ಪರಮ ಜ್ಯೋತಿ ಸೇವಾ ಸಮಿತಿ ಮೂಲಕ ನೀಡಲಾಯಿತು.
ದಾನಿಗಳ ಸಹಕಾರದಲ್ಲಿ ಯೋಗ ಮ್ಯಾಟ್, ವಿದ್ಯಾರ್ಥಿನಿಯರಿಗೆ ಸ್ವಚ್ಛತೆ ಮೂಡಿಸಲು ಸ್ಯಾನಿಟರಿ ಪ್ಯಾಡ್ ನೀಡಿದರು. ದಾನಿ ಹಾಗೂ ಸಂಘಟನೆಯ ಪ್ರಮುಖರು ಮಕ್ಕಳೊಂದಿಗೆ ಯೋಗ ಅಭ್ಯಾಸ ನಡೆಸಿದರು. ಯೋಗ ತೆರಪಿಸ್ಟ್ ರಶ್ಮಿ ಯೋಗ ಅಭ್ಯಾಸ ನಡೆಸಿದರು.
ಈ ಸಂದರ್ಭ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ಗೋಣಿಕೊಪ್ಪ ಪರಮ ಜ್ಯೋತಿ ಸೇವಾ ಸಮಿತಿ ಮುಖ್ಯ ಸೇವಕಿ ಲತಾ ಪೂಣಚ್ಚ, ದಾನಿ ಕೊಣಿಯಂಡ ರೋಹಿಣಿ ದೇವಯ್ಯ, ಚೆಷೈರ್ ಹೋಂ ಸಂಸ್ಥೆ ಅಧ್ಯಕ್ಷೆ ಗೀತಾ ಚೆಂಗಪ್ಪ, ಉಪಾಧ್ಯಕ್ಷೆ ಸುನಿತಾ ರಾಮಸ್ವಾಮಿ, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಶಾಲೆ ಮುಖ್ಯ ಶಿಕ್ಷಕ ಶಿವರಾಜ್, ಉಪಸ್ಥಿತರಿದ್ದರು.
ಕಾವೇರಿ ಶಾಲೆ: 5ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕಾವೇರಿ ಶಾಲೆಯ ಆವರಣದಲ್ಲಿ ಯೋಗ ದಿನವನ್ನು ಹಮ್ಮಿಕೊಳ್ಳಲಾಗಿತ್ತು. ಯೋಗ ಶಿಕ್ಷಕ ವಿ.ಟಿ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಯೋಗಾಸನಗಳನ್ನು ಮಾಡಿದರು. ಶಾಲಾ ಮಂಡಳಿ ಅಧ್ಯಕ್ಷ ಸುದೇಶ್ ಬಿ.ಎಸ್. ಮಾತನಾಡಿ, ಯೋಗವನ್ನು ನಿಯಮಿತವಾಗಿ ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದ ರೋಗ ಮುಕ್ತ ಜೀವನ ನಡೆಸಲು ಸಾಧ್ಯ ಎಂದು ಯೋಗದ ಬಗ್ಗೆ ಅರಿವು ಮೂಡಿಸಿದರು.
ಕಾರ್ಯದರ್ಶಿಗಳು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಯೋಗ ದಿನಾಚರಣೆಯಲ್ಲಿ ಹಾಜರಿದ್ದರು.ಕೂಡಿಗೆ: ಯೋಗ ದಿನದ ಅಂಗವಾಗಿ ಕೂಡಿಗೆಯ ಸರ್ಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು. ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ, ಕ್ರೀಡಾ ತರಬೇತುದಾರ ಅಂತೋಣಿ ಡಿಸೋಜ, ವೆಂಕಟೇಶ್, ಆಡಳಿತ ವರ್ಗ ಹಾಗೂ ಸಿಬ್ಬಂದಿ ಇದ್ದರು.
ಸಾಂದೀಪನಿ ಶಾಲೆ: ಸೋಮವಾರಪೇಟೆ ಸಮೀಪದ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಯೋಗ ಮಾಡಿದರು. ಶಾಲಾ ಶಿಕ್ಷಕ ವೃಂದದವರು ಈ ಸಂದರ್ಭ ಉಪಸ್ಥಿತರಿದ್ದರು.
ಸುಂಟಿಕೊಪ್ಪ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ರಾಜ್ಯ ಶಾಸ್ತ್ರÀ ಉಪನ್ಯಾಸಕ ಸೋಮಚಂದ್ರ ಸಮಾಜ ಶಾಸ್ತ್ರ ಉಪನ್ಯಾಸಕಿ ಕೆ.ಎಸ್. ಮಂಜುಳ ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ ಮುಂತಾದ ಆಸನಗಳನ್ನು ಪ್ರದರ್ಶಿಸಿ, ಯೋಗಾಸನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪಿ.ಎಸ್. ಜಾನ್ ಮಾತನಾಡಿದರು. ಈ ಸಂದರ್ಭ ಉಪನ್ಯಾಸಕರುಗಳಾದ ಬೆಳ್ಯಪ್ಪ, ಫಿಲಿಪ್ ವಾಸ್, ಸುಕನ್ಯ, ಕೆ.ಸಿ. ಕವಿತಾ, ಕವಿತಾಬಕ್ತ್, ಪದ್ಮಾವತಿ, ಕಾವ್ಯ, ಎಸ್.ಹೆಚ್. ಈಶ ಹಾಜರಿದ್ದರು.
ಅರುವತ್ತೋಕ್ಲು: ಇಲ್ಲಿನ ಸರ್ವದೈವತಾ ವಿದ್ಯಾಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಸಾಮೂಹಿಕವಾಗಿ ಯೋಗಾಸನ ವನ್ನು ಮಾಡಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ ಮಾತನಾಡುತ್ತಾ ಐದನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಘೋಷ ವಾಕ್ಯದ ಶಾಂತಿ,ಸೌಹಾರ್ದತೆ,ಸಂತಸಗಳ ಸಮ್ಮಿಲನ ನಮ್ಮ ಜೀವನದಲ್ಲಿ ಆಗ ಬೇಕಾದರೆ ನಿರಂತರ ಯೋಗಾಸನಗಳನ್ನು ನಾವು ಅಭ್ಯಸಿಸುವುದು ಉತ್ತಮವೆಂದು ಕರೆ ನೀಡಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಪೆಮ್ಮಂಡ ಮಾಯಮ್ಮ ಅಪ್ಪಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರುಗಳಿಗೆ ತಮ್ಮ ವೃತ್ತಿಯಲ್ಲಿ ಸಾರ್ಥಕತೆ ಕಾಣಲು ಹಲವು ಸೂತ್ರಗಳನ್ನು ತಿಳಿಸಿದರಲ್ಲದೆ, ಯೋಗದ ಕುರಿತಾಗಿ ಸ್ವವಿರಚಿತ ಕವನ ಮೂಡಿಸಿದರು. ಪ್ರಾಂಶುಪಾಲೆ ಲಲಿತ ಮೊಣ್ಣಪ್ಪ, ಮುಖ್ಯ ಶಿಕ್ಷಕ ಪ್ರದೀಪ್ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಕುಮಾರಿ ಕ್ರೀಷ್ಮ ಮತ್ತು ತಂಡ ನೆರವೇರಿಸಿದರೆ, ಶಿಕ್ಷಕಿ ಧರಣಿ ಸ್ವಾಗತಿಸಿ, ಶಿಕ್ಷಕಿ ಲೀನಾ ರಾಘವೇಂದ್ರ ನಿರೂಪಿಸಿದರು ಸಾಮೂಹಿಕ ಯೋಗಾಸನ ಮಾಡಲಾಯಿತು. ಶಿಕ್ಷಕಿ ಮೋನಿಕ ವಂದಿಸಿದರು. ವೀರಾಜಪೇಟೆ ರೋಟರಿ ಪ್ರಾಥಮಿಕ ಶಾಲೆ: ವೀರಾಜಪೇಟೆಯ ರೋಟರಿ ಪ್ರಾಥಮಿಕ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ರೋ. ಎಂ.ಎಸ್. ರವಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಿಂದ ಸಾಂಕೇತಿಕ ಯೋಗಾಸನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಶಾಲೆಯ ಯೋಗ ಶಿಕ್ಷಕ ಶ್ರೀನಿವಾಸನ್, ಆಡಳಿತಾಧಿಕಾರಿ ಪ್ರಮೀಳ ಚಿಣ್ಣಪ್ಪ, ಮುಖ್ಯೋಪಾಧ್ಯಾಯಿನಿ ಇಂದು ಸುಬ್ಬಯ್ಯ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.
ಮಡಿಕೇರಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ ಹಾಗೂ ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾಲೇಜಿನ ಆವರಣದಲ್ಲಿ ಅಂತರರಾಷ್ಟೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ. ವೈ. ಚಿತ್ರಾ ವಹಿಸಿಕೊಂಡು, ಎಲ್ಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗ ಮಾಡಬೇಕು, ಯೋಗಾಭ್ಯಾಸವನ್ನು ಹವ್ಯಾಸವಾಗಿ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಆರ್. ಶಶಿಧರ್ ಯೋಗ ಭಾರತೀಯರು ವಿಶ್ವಕ್ಕೆ ನೀಡಿರುವ ಕೊಡುಗೆ. ಜಗತ್ತಿನ ಹೆಚ್ಚಿನ ಎಲ್ಲಾ ರಾಷ್ಟ್ರಗಳು ಇಂದು ಅಂತರರಾಷ್ಟ್ರೀಯ ಯೋಗ ದಿನಾಚಾರಣೆಯನ್ನು ಆಚರಿಸುತ್ತಿಸುತ್ತಿದ್ದಾರೆ. ಯೋಗ ಆಚರಣೆಯಿಂದ ಪ್ರತಿಯೊಬ್ಬರೂ ದೈಹಿಕ ಮತ್ತು ಮಾನಸಿಕ ಸ್ಥಿಮಿತತೆಯನ್ನು ಕಾಪಾಡಬಹುದು ಎಂದು ಹೇಳಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ ಕೆ.ಸಿ. ದಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರೊ. ಪ್ರಕಾಶ್ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಅನುಪಮ ಸಭಾಪತಿ, ಪ್ರೊ. ರಾಘವೇಂದ್ರ ಪ್ರಕಾಶ್ ಹಾಜರಿದ್ದರು.
ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು: ವೀರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನಲ್ಲಿ ಎನ್.ಎಸ್.ಎಸ್. ಘಟಕದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜಿನ ಪ್ರಧಾನ ವ್ಯವಸ್ಥಾಪಕ ಮದಲೈಮುತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ದೇಹದ ಸಮತೋಲನವನ್ನು ಕಾಯ್ದುಕೊಳ್ಳಲು ಹಾಗೂ ಏಕಾಗ್ರತೆಯಂದಿರಲು ಯೋಗ ಸಹಕಾರಿ ಎಂದರು.
ಕಾಲೇಜಿನ ವಿದ್ಯಾರ್ಥಿಗಳು ಯೋಗಾಸನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎನ್.ಎಸ್.ಎಸ್. ಘಟಕದ ಶಿಕ್ಷಕ ಹೆಚ್.ಆರ್. ಅರ್ಜುನ್ ಇತರ ಶಿಕ್ಷಕರು ಹಾಜರಿದ್ದರು.