ಮಡಿಕೇರಿ, ಜೂ. 23: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕಾವೇರಿ ನಾಡಿನ ಉದ್ದಗಲಕ್ಕೂ ಕೊಡಗಿನಾದ್ಯಂತ ಕಾರ್ಯಕ್ರಮಗಳೊಂದಿಗೆ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.ಜಿಲ್ಲಾಡಳಿತದ ಕರೆಗೆ ಓಗೊಟ್ಟ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲೆಡೆ ಯೋಗ ಪ್ರದರ್ಶನದೊಂದಿಗೆ ಆರೋಗ್ಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಯಿತು.ನಾಪೆÇೀಕ್ಲು: ನಾಪೆÇೀಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲೆಯ ರೋಟರಿ ಇಂಟರ್ಯಾಕ್ಟ್ ಕ್ಲಬ್, ಎನ್.ಸಿ.ಸಿ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ವಿಶ್ವ ಯೋಗ ದಿನ ಹಾಗೂ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ರೋಟರಿ ಮಿಸ್ಟಿ ಹಿಲ್ಸ್ನ ಕುಲ್ಲೇಟಿರ ಅಜಿತ್ ನಾಣಯ್ಯ ಗಿಡ ನೆಡುವದರ ಮೂಲಕ ಪರಿಸರ ದಿನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕ ವೃಂದ ಇದ್ದರು.ಬಿಟಿಸಿಜಿ ಕಾಲೇಜು: ಸಮೀಪದ ಯಡೂರು À ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗ ಶಿಬಿರ ನಡೆಯಿತು.
ವಿದ್ಯಾರ್ಥಿಗಳು ಮತ್ತು ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಯೋಗಾಸನ ಮಾಡಿದರು. ಪ್ರಾಂಶುಪಾಲರಾದ ಪ್ರೊ. ಶ್ರೀಧರ ಅವರು ಯೋಗಾಸನಗಳ ಮಹತ್ವದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಪ್ರಾಧ್ಯಾಪಕರಾದ ಪ್ರೊ. ಹೆಚ್.ಎನ್. ರಾಜು, ಬಿ.ಎಂ. ಪ್ರವೀಣ್ಕುಮಾರ್, ಕೆ.ಹೆಚ್. ಧನಲಕ್ಷ್ಮಿ, ಎಂ.ಎಸ್. ಶಿವಮೂರ್ತಿ, ಅಧೀಕ್ಷಕ ಕೆ. ಆನಂದಮೂರ್ತಿ, ಗ್ರಂಥಪಾಲಕರಾದ ವೈ.ಎನ್. ಧರ್ಮಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಒಡೆಯನಪುರ: ಶನಿವಾರಸಂತೆ ಪಟ್ಟಣ ಸೇರಿದಂತೆ ವಿವಿಧ ಕಡೆಗಳಲ್ಲಿ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಶನಿವಾರಸಂತೆಯ ಯೋಗ ಬಂಧುಗಳು, ಸಹಕಾರ ಬ್ಯಾಂಕ್ ಆಡಳಿತ ಮಂಡಳಿ, ಶನಿವಾರಸಂತೆ ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಐದನೆ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಸಾಮೂಹಿಕವಾಗಿ ಆಚರಿಸಲಾಯಿತು. ಬೆಂಗಳೂರಿನ ಯೋಗ ಶಿಕ್ಷಕ ಪುಟ್ಟನಂಜಪ್ಪ ಯೋಗ ಮತ್ತು ಧ್ಯಾನದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಶನಿವಾರಸಂತೆ ಯೋಗ ಬಂಧು ತರಬೇತುದಾರರಾದ ಎ.ಡಿ.ಮೋಹನ್ಕುಮಾರ್, ಬೀನಾ ಅರವಿಂದ್, ಪ್ರಮುಖರಾದ ಅರವಿಂದ್ ರವಿ, ಟಿ.ಆರ್.ಗಿರೀಶ್, ಎಚ್.ಪಿ.ಮೋಹನ್, ಹಂಡ್ಲಿ ಪ್ರದೀಪ್, ಸೋಮಶೇಖರ್, ಎನ್.ವಿ. ಹರೀಶ್ ಮುಂತಾದವರಿದ್ದರು.
ಕರಿಕೆ: ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಎಳ್ಳುಕೊಚ್ಚಿ ಹಾಗೂ ಕರಿಕೆ ಪೊಲೀಸ್ ಉಪಠಾಣೆ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಜಕ್ರೀಯಾ ಎರಡು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರಾದ ಪ್ರವೀಣ್, ನಿಂಗಪ್ಪ, ಸರಸ್ವತಿ ಸೇರಿದಂತೆ ಇತರ ಶಿಕ್ಷಕರು ಆರಕ್ಷಕ ಉಪ ಠಾಣೆಯ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯ ಬೇಕಲ್ ರಮಾನಾಥ ಭಾಗವಹಿಸಿದ್ದರು.ಮಡಿಕೇರಿ ಸಂತ ಜೋಸೆಫರ ಶಾಲೆ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಅರಣ್ಯ ಇಲಾಖೆ ಮತ್ತು ಸಂತ ಜೋಸೆಫರ ವಿದ್ಯಾಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಸಂತ ಜೋಸೆಫರ ಶಾಲೆಯಲ್ಲಿ ಯೋಗ ದಿನಾಚರಣೆ ಮತ್ತು ಪರಿಸರ ದಿನಾಚರಣೆ ನಡೆಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಮಾತನಾಡಿ, ಯೋಗ ಅನ್ನೋದು ನಮ್ಮ ದೇಶ ನೀಡಿರುವ ಕೊಡುಗೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಯೋಗ ಮತ್ತು ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸುಕ್ರುದೇವೇಗೌಡ, ರಾಣಿ ಮಾಚಯ್ಯ, ಖಜಾಂಚಿ ಸೋಮಯ್ಯ, ಸಂಚಾಲಕಿ ದಮಯಂತಿ, ಸಂತ ಜೋಸೆಫರ ಶಾಲೆಯ ಸಿಸ್ಟರ್ ರೋಜಾ, ಯೋಗ ತರಬೇತಿದಾರ ವೆಂಕಟೇಶ್ ಇದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕೆ.ಬಿ. ಕಾಳಪ್ಪ ಸ್ವಾಗತಿಸಿ, ಶಿಕ್ಷಕಿ ಸ್ವರೂಪ, ಬಿ.ಎಸ್. ಜಯಪ್ಪ ನಿರೂಪಿಸಿದರು. ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯಕ್ರಮಗಳ ಯೋಜನೆಯ ಪುಸ್ತಕವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಬಿಡುಗಡೆ ಮಾಡಿದರು.
ಮೂರ್ನಾಡು ಶಾಲೆ: ಮೂರ್ನಾಡುವಿನ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ವಿಶ್ವ ಯೋಗ ದಿನಾಚರಣೆಯೊಂದಿಗೆ ಪರಿಸರದ ಉಳಿವಿಗಾಗಿ ಜಾಗೃತಿ ಜಾಥಾ ಕೂಡ ನೆರವೇರಿತು. ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಕಾರ್ಯದರ್ಶಿ ವೇಣುಅಪ್ಪಣ್ಣ ದಿನದ ಮಹತ್ವ ಕುರಿತು ಮಾತನಾಡಿದರು. ಆಡಳಿತ ಮಂಡಳಿಯ ಪ್ರೊ. ಸುಶೀಲ, ಕಾವೇರಪ್ಪ, ದೇವಕಿ, ಪ್ರಶಾಂತ್ ಸೇರಿದಂತೆ ಉಪನ್ಯಾಸಕ ವೃಂದ, ವಿದ್ಯಾರ್ಥಿ ಸಮೂಹದವರು ಪಾಲ್ಗೊಂಡಿದ್ದರು.ಮೂರ್ನಾಡು ಕಾಲೇಜು: ಮೂರ್ನಾಡು ಪದವಿ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಶಕ್ತಿ ದಿನ ಪತ್ರಿಕೆಯ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ರವರು ಆಗಮಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಯೋಗದ ಮಹತ್ವ ಹಾಗೂ ಯೋಗಾಭ್ಯಾಸವನ್ನು ಮಾಡುವದರಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಸಿಕೊಟ್ಟರು.
ಮುಖ್ಯ ಅತಿಥಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೇಟ್ಟಿರ ಜಿ. ಮಾದಪ್ಪ ಮಾತನಾಡಿ, ವಿದ್ಯಾಸಂಸ್ಥೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಉಪಯೋಗವಾಗುವಂತೆ ಖಾಯಂ ಆಗಿ ಯೋಗ ತರಬೇತುದಾರರನ್ನು ನೇಮಿಸುವ ಬಗ್ಗೆ ಚಿಂತಿಸಲಾಗುವದು ಎಂದು ತಿಳಿಸಿದರು. ಮತ್ತೊಬ್ಬ ಅತಿಥಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮಾತನಾಡಿ, ದಿನನಿತ್ಯದ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳುವದರಿಂದ ಆರೋಗ್ಯದಲ್ಲಿ ಸ್ಥಿಮಿತವನ್ನು ಕಾಪಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಮಾತನಾಡಿ, ಪ್ರಾಣಾಯಾಮದ ಮಹತ್ವ ಹಾಗೂ ಇದರಿಂದ ಅನೇಕ ಆರೋಗ್ಯದ ಸಮಸ್ಯೆಗಳಿಂದ ದೂರವಾಗಬಹುದು ಎಂದು ತಿಳಿಸಿಕೊಟ್ಟರು.
ಸ್ವಾಗತವನ್ನು ಉಪನ್ಯಾಸಕ ನವೀನ್ ಮಾಡಿದರು. ನಿರೂಪಣೆಯನ್ನು ಉಪನ್ಯಾಸಕ ಹರೀಶ್ ಹಾಗೂ ಉಪನ್ಯಾಸಕಿ ಕಲ್ಪನ ವಂದಿಸಿದರು.ಸುಂಟಿಕೊಪ್ಪ: ಶಿಕ್ಷಣ ಇಲಾಖೆ ವತಿಯಿಂದ ಸ್ಥಳೀಯ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಮೈದಾನದಲ್ಲಿ ಉಭಯ ಶಾಲೆಗಳ ಮಕ್ಕಳಿಗೆ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಅಭ್ಯಾಸ ಮಾಡಿಸಲಾಯಿತು. ವಿವಿಧ ಆಸನಗಳನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡಿದರು.
ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವೆಂಕಟೇಶ್, ಮುಖ್ಯ ಶಿಕ್ಷಕ ಬಾಲಕೃಷ್ಣ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿ.ಎ. ಗೀತಾ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಎಸ್.ಕೆ. ಸೌಭಾಗ್ಯ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಇತರರು ಇದ್ದರು.ಹೆಬ್ಬಾಲೆ-ಕೂಡಿಗೆ: ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಎಲ್. ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹ ಶಿಕ್ಷಕ ಲೋಕೇಶ್ ಪ್ರಾರ್ಥಿಸಿದರು, ದೈಹಿಕ ಶಿಕ್ಷಣ ಶಿಕ್ಷಕ ಬೋಜೇಗೌಡ ಪ್ರಾಸ್ತಾವಿಕ ನುಡಿಗಳಾಡಿದರು, ಮುಖ್ಯ ಅತಿಥಿಗಳಾಗಿ ನಿವೃತ್ತ ಕಾರ್ಯಪಾಲಕ ಅಭಿಯಂತರ ಜಿ.ಎಲ್. ರಾಮಪ್ಪ ಪಾಲ್ಗೊಂಡಿದ್ದರು.
ಎಂ.ಕೆ. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು, ಎಸ್.ಎಂ. ಸ್ನೇಹ ಪ್ರಾರ್ಥಿಸಿದರು, ಎಸ್.ಎಂ. ನಟರಾಜ್ ವಂದಿಸಿದರು.
ಡಿ. ಚೆನ್ನಮ್ಮ ಪಿ.ಯು. ಕಾಲೇಜು: ಮಾದಾಪುರದ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲೂ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಶಿಕ್ಷಕಿ ಅಶ್ವಿನಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಎಲ್.ಪಿ. ಪಾಲಾಕ್ಷ ಯೋಗದ ಬಗ್ಗೆ ಮಾಹಿತಿ ನೀಡಿದರು.
ಪ್ರಾಚಾರ್ಯ ಮತ್ತು ಸಂಸ್ಥೆಯ ಎಲ್ಲ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಯೋಗಾಭ್ಯಾಸದ ಮೂಲಕ ಯೋಗ ದಿನಾಚರಣೆ ಆಚರಿಸಿದರು.ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು. ಡಾನ್ ರಾಜಪ್ಪ ಮಾರ್ಗದರ್ಶನದಲ್ಲಿ ಉಪನ್ಯಾಸಕರಾದ ಪಿ.ಸಿ. ಕೃಷಿಕ ಹಾಗೂ ಪಿ.ಸಿ. ಮೀನಾಕ್ಷಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿದರು. ಈ ಸಂದರ್ಭ ಪದವಿ ಕಾಲೇಜು ಪ್ರಾಂಶುಪಾಲೆ ಎಸ್.ಆರ್. ಉಷಾಲತ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಉಪ ಪ್ರಾಂಶುಪಾಲ ಕೆ.ವಿ. ಕುಸುಮಾಧರ್, ಎನ್.ಎಸ್.ಎಸ್. ಅಧಿಕಾರಿ ಎಸ್.ಆರ್.ತಿರುಮಲಯ್ಯ, ಎನ್ಸಿಸಿ ಅಧಿಕಾರಿಗಳಾದ ಎಂ.ಆರ್. ಅಕ್ರಂ ಹಾಗೂ ಐ.ಡಿ. ಲೇಪಾಕ್ಷಿ ಇದ್ದರು.ಪೊನ್ನಂಪೇಟೆ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪೊನ್ನಂಪೇಟೆ ಸಂತ ಅಂಥೋಣಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಆಚರಿಸಲಾಯಿತು. ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಿಂದ 225 ವಿದ್ಯಾರ್ಥಿಗಳು ಯೋಗ ಮತ್ತು ಪ್ರಾಣಾಯಾಮ ಅಭ್ಯಾಸ ನಡೆಸಿದರು. ಈ ಸಂದರ್ಭ ಫಾ. ಡೇವಿಡ್ ಸಗಾಯಿರಾಜ್ ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.ಕುಶಾಲನಗರ: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕುಶಾಲನಗರದಲ್ಲಿ ಯೋಗ ಕಾರ್ಯಕ್ರಮಗಳು ನಡೆದವು. ಸ್ವಾಭಿಮಾನ್ ಟ್ರಸ್ಟ್, ಯೋಗ ಪರ್ವ, ಪತಾಂಜಲಿ ಯೋಗ ಸಮಿತಿ, ಜಂಟಿಯಾಗಿ ಕುಶಾಲನಗರದ ಕನ್ನಿಕಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಯೋಗ ಅಭ್ಯಾಸ ನಡೆಸಲಾಯಿತು. ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರಣ್ಯ ಇಲಾಖೆಯ ತರಬೇತುದಾರರು ಪಾಲ್ಗೊಂಡಿದ್ದರು. ಯೋಗ ಶಿಕ್ಷಕ ಜಿ. ಮಧುಸೂದನ್ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಅತಿಥಿಯಾಗಿ ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಸಂಚಾಲಕ ಬಿ. ಅಮೃತ್ರಾಜ್, ಅರಣ್ಯ ತರಬೇತಿ ಕೇಂದ್ರದ ಅಧಿಕಾರಿ ಶ್ರೀನಿವಾಸ್, ದೈಹಿಕ ಶಿಕ್ಷಣ ಶಿಕ್ಷಕ ವಾಸು ಮತ್ತಿತರರು ಇದ್ದರು. ಕುಶಾಲನಗರ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿಗಳು ಯೋಗ ಕಾರ್ಯಕ್ರಮ ದಲ್ಲಿ ಪಾಲ್ಗೊಂಡರು. ಯೋಗ ಶಿಕ್ಷಕ ಜಿ. ಮಧುಸೂದನ್, ಮಹೇಶ್, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಶಂಭುಲಿಂಗಪ್ಪ ಮತ್ತಿತರರು ಇದ್ದರು.ಒಡೆಯನಪುರ: ಸಮೀಪದ ಶ್ರೀ ವಿಘ್ನೇಶ್ವರ ಬಾಲಕಿಯರ ಸಂಯುಕ್ತ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ವಿದ್ಯಾಸಂಸ್ಥೆ ಬಾಲಕಿಯರು ಸಾಮೂಹಿಕವಾಗಿ ಯೋಗಾಭ್ಯಾಸ ಮಾಡುವ ಮೂಲಕ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು. ಶನಿವಾರಸಂತೆ ಪಟ್ಟಣದ ಕಾವೇರಿ ಸಂಯುಕ್ತ ಪ.ಪೂ. ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಟದ ಮೈದಾನದಲ್ಲಿ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿದರು. ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ, ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದರು.*ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಆಶ್ರಮದ ಸ್ವಾಮೀಜಿಗಳು ಭಕ್ತರು ಸೇರಿ ಯೋಗ ದಿನ ಆಚರಿಸಿದರು.
ಆಶ್ರಮದ ಸ್ವಾಮೀಜಿ ಬೋಧಸ್ವರೂಪನಂದ, ಸಬ್ಇನ್ಸ್ ಪೆಕ್ಟರ್ ಮಹೇಶ್ ಮೊದಲಾದವರು ಪಾಲ್ಗೊಂಡಿದ್ದರು.ಭಾರತಿ ವಿದ್ಯಾಸಂಸ್ಥೆ ಶನಿವಾರಸಂತೆ: ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಕಾಲೇಜಿನ ಸಭಾಂಗಣದಲ್ಲಿ ಯೋಗ ಶಿಕ್ಷಕಿ ಬೀನಾ ಅರವಿಂದ್ ಯೋಗಾಸನದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಸೂರ್ಯ ನಮಸ್ಕಾರ, ಪ್ರಾಣಾಯಾಮ ಇತ್ಯಾದಿ ಯೋಗಾಸನದ ಪ್ರದರ್ಶನಗಳ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲ ಈ.ಎಂ. ದಯಾನಂದ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಿವೇಕ್, ಉಪನ್ಯಾಸಕರು ಹಾಜರಿದ್ದರು.ಕಾವೇರಿ ಕಾಲೇಜು: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು 19ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಘಟಕದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆನಂದ್ ಕಾರ್ಲ, ಯೋಗ ಗುರು ಚಂದ್ರನ್, ಎನ್.ಸಿ.ಸಿ. ಅಧಿಕಾರಿ ಸಿ.ಪಿ. ನಿರ್ಮಿತ ಇದ್ದರು.ಕೂಡಿಗೆ: ಕೂಡಿಗೆ ಸೈನಿಕ ಶಾಲೆಯಲ್ಲಿ 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ‘ಆರೋಗ್ಯವಂತ ಹೃದಯಕ್ಕಾಗಿ ಯೋಗ’ ಎಂಬ ಶೀರ್ಷಿಕೆಯಡಿ ಆಚರಿಸಲಾಯಿತು.
ಬೆಳಿಗ್ಗೆ 1 ಗಂಟೆ ಕಾಲ ಸಾಮೂಹಿಕ ಯೋಗ ಪ್ರದರ್ಶನ ವನ್ನು ಹಮ್ಮಿಕೊಳ್ಳಲಾಗಿತ್ತು. ಪೊನ್ನಂಪೇಟೆಯ ರಾಮಕೃಷ್ಣ ಮಠದ ಸ್ವಾಮೀಜಿ ಗೋಪೇಂದ್ರನಂದಾಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲೆಯ ಉಪ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಆರ್.ಕೆ. ಡೇ, ಬೋಧಕ, ಬೋಧಕೇತರ ವರ್ಗ ಹಾಗೂ 604 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಾಲೆಯ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳು ಗುಂಪು ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ‘ಸಮ್ಮೊತ್ತಮ್ ಯೋಗ ಉಚ್ಚತೇ’ ಎಂಬ ಯೋಗ ವಿಷಯಾ ಧಾರಿತ ಕಿರುನಾಟಕವನ್ನು ಪ್ರದರ್ಶಿಸಿ ದರು. ತರಬೇತುದಾರ ಪ್ರಮೋದ್ ಮತ್ತು ತಂಡ ಹಲವು ಯೋಗಾಸನ ಪ್ರದರ್ಶಿಸಿದರು.