ಗೋಣಿಕೊಪ್ಪಲು, ಜೂ.22: ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಐದನೇ ವಾರ್ಡಿನ ಗ್ರಾಮ ಪಂಚಾಯ್ತಿ ಸದಸ್ಯರಾದ ಕಲೀಂಮುಲ್ಲಾ ಅವರಿಗೆ ಗೋಣಿಕೊಪ್ಪ ನಗರ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಗೋಣಿಕೊಪ್ಪಲುವಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಗರ ಕಾಂಗ್ರೆಸ್‍ನ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಾಜಿ ನಗರ ಕಾಂಗ್ರೆಸ್‍ನ ಅಧ್ಯಕ್ಷರಾದ ಅಜಿತ್ ಅಯ್ಯಪ್ಪ,ಪಕ್ಷದ ಮುಖಂಡರಾದ ಅಬ್ದುಲ್ ಸಮ್ಮದ್, ಸಮೀರ್, ಬಿ.ಎನ್.ಪ್ರಕಾಶ್, ಚಡ್‍ಖಾನ್ ರಫೀಕ್, ಅಬ್ದುಲ್ ಜಲೀಲ್, ಮುಂತಾದವರು ಮಾತನಾಡಿದರು. ಸಭೆಯಲ್ಲಿ ಪಕ್ಷದ ಪ್ರಮುಖರಾದ ರಾಜಶೇಖರ್, ಪಿ.ಕೆ.ಪ್ರವೀಣ್, ಧನಲಕ್ಷ್ಮಿ, ಜಾಸ್ಮೀನ್, ಮಂಜುಳ, ಅಬ್ದುಲ್ ಅಜೀಸ್, ಜೆ.ಕೆ.ಸೋಮಣ್ಣ, ಮುಂತಾದವರು ಉಪಸ್ಥಿತರಿದ್ದರು.