ವೀರಾಜಪೇಟೆ, ಜೂ. 22: ವೀರಾಜಪೇಟೆ ಸಮೀಪದ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಗೆ ಸೇರಿದ ಬೆಳ್ಳರಿಮಾಡು ಗ್ರಾಮದ ನಿವಾಸಿಗಳು ದೇವರಕಾಡು ಸಂರಕ್ಷಣೆ ಹಾಗೂ ಪರಿಸರದ ಹಸಿರು ಸಂರಕ್ಷಿಸುವ ಉದ್ದೇಶದಿಂದ ಗ್ರಾಮದ ದೇವರಕಾಡಿನಲ್ಲಿ ಸುಮಾರು 600ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಮಾದರಿ ತೋರಿದ್ದಾರೆ.

ಗ್ರಾಮಸ್ಥರ ಈ ಮಹತ್ತರ ಕಾರ್ಯಕ್ಕೆ ಸ್ವತಃ ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಟೇರಿರ ಪ್ರೇಂ ನಾಣಯ್ಯ ಕೈ ಜೋಡಿಸಿದರು. ಉಳಿದಂತೆ ಗ್ರಾಮದ ಪ್ರಮುಖರಾದ ಬಿದ್ದಂಡ ಮನು, ಪುಟ್ಟಿಚಂಡ ಕುಟುಂಬದ ಸುಬ್ರಮಣಿ, ಬೋಪಣ್ಣ, ನವೀನ್, ನರೇಂದ್ರ, ಬಿದ್ದಪ್ಪ, ಗಣಪತಿ, ಸೋಮಯ್ಯ, ನಯನ್, ಅಮ್ಮೆಯಂಡ ಸೋಮಯ್ಯ, ಪಟ್ರಪಂಡ ವಿಜಯ ಹಾಗೂ ಜಗದೀಶ್, ಬಲ್ಲುಡ ಡಾನ್ ಬೋಪಣ್ಣ ಹಾಜರಿದ್ದರು.