ಮಡಿಕೇರಿ, ಜೂ. 22: ಬೆಟ್ಟಗೇರಿ ಸಮೀಪದ ಅಪ್ಪಂಗಳ ನಿವಾಸಿ ಅಲ್ಲಾರಂಡ ರಾಜ (55) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮನೆಯ ಹಿಂಬದಿ ಕೋಣೆಯಲ್ಲಿ ಉರುಳಿಗೆ ಕೊರಳೊಡ್ಡಿ ಮೃತ್ಯುವಿಗೀಡಾಗಿರುವ ರಾಜ ಅವರು ಪತ್ನಿ ಜಿ.ಪಂ. ಮಾಜೀ ಉಪಾಧ್ಯಕ್ಷೆ ಬೀನಾ ಬೊಳ್ಳಮ್ಮ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.